Raibag

2020-21ನೇ ಸಾಲಿನಲ್ಲಿ ಬೆಳೆ ಸಮೀಕ್ಷೆ ನಡೆಸಿದ PR ಗಳ ವೇತನಕ್ಕೆ ಆಗ್ರಹಿಸಿ ರಾಯಬಾಗ ತಹಶಿಲ್ದಾರರಿಗೆ ಮನವಿ

Share

2020 ಮತ್ತು 2021ನೇ ಸಾಲಿನ ಸರ್ಕಾರದ ಯೋಜನೆಯಾದ ಬೆಳೆ ಸಮೀಕ್ಷೆಯ ಕಾರ್ಯವನ್ನು ಮಾಡಿದ Pಖ ಗಳ ವೇತನ ಬಿಡುಗಡೆ ಮಾಡುವಂತೆ ರಾಯಬಾಗ ಗ್ರೇಡ್ 2 ತಹಸೀಲ್ದಾರ ಪರಮಾನಂದ ಮಂಗಸೂಳಿ ಅವರಿಗೆ Pಖ ಗಳಿಂದ ಮನವಿ ಸಲ್ಲಿಸಲಾಯಿತು,

2020 ಮತ್ತು 2021ನೇ ಸಾಲಿನ ಸರ್ಕಾರದ ಯೋಜನೆಯಾದ ಬೆಳೆ ಸಮೀಕ್ಷೆಯ ಕಾರ್ಯವನ್ನು ರಾಯಬಾಗ ತಾಲೂಕಿನ ಬೇರೆ ಬೇರೆ ಹಳ್ಳಿಯ ಯುವಕರು ಸೇರಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ರಾಯಬಾಗ ತಾಲೂಕಿನ ಕೃಷಿ ಅಧಿಕಾರಿಗಳ ಆಯ್ಕೆಯ ಮೇರೆಗೆ ಆಯಾ ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿ 3 ರಿಂದ 4 ತಿಂಗಳು ಆಗಿದ್ದು ಇದುವರೆಗೆ Pಖ ಗಳಿಗೆ ನೀಡಬೇಕಾದ ಸಂಬಳವನ್ನು ಸರಿಯಾಗಿ ನೀಡದೆ ಕಾಟಾಚಾರಕ್ಕೆ ಅಂತಾ Pಖ ಗಳ ಒತ್ತಾಯದ ಮೇರೆಗೆ 100,200,500,1000 ರೂ ಹೀಗೆ ಒಂದು ಸಾರಿ ಮಾತ್ರ ಜಮಾ ಮಾಡಿದ್ದು ಇದರಲ್ಲಿ ಅನೇಕ ಬಡ ಯುವಕರು ಕೆಲಸ ಮಾಡಿ ವೇತನಕ್ಕಾಗಿ ಅಲೆದಾಡಿದರು ಕೂಡಾ ಇದುವರೆಗೆ ವೇತನ ನೀಡಿಲ್ಲ ಇನ್ನೂ ಸಂಬಂಧಪಟ್ಟ ಅಧಿಕಾರಿಗಳನ್ನು ಖುದ್ದಾಗಿ ವಿಚಾರಿಸಿದಾಗ ಹಾರಿಕೆಯ ಉತ್ತರಗಳನ್ನು ನೀಡಿರುತ್ತಾರೆ ,

ಕೊರೋನಾ ರೋಗವನ್ನು ಲೆಕ್ಕಿಸದೆ,ಮಳೆ ಬಿಸಿಲನ್ನು ನೋಡದೆ ಬೆಳೆ ಸಮಿಕ್ಷೆಯನ್ನು ಮಾಡಿರುತ್ತೆವೆ ಕೂಡಲೆ ವೇತನ ಬಿಡುಗಡೆ ಮಾಡುವಂತೆ ರಾಯಬಾಗ ಗ್ರೇಡ್ 2 ತಹಸೀಲ್ದಾರ ಪರಮಾನಂದ ಮಂಗಸೂಳಿ ಅವರ ಮೂಲಕ ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ,ಬೆಳಗಾವಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೃಷಿ ಸಚಿವರಾದ ಬಿ ಸಿ ಪಾಟೀಲ್ ಅವರಿಗೆ ಅವರಿಗೆ ಮನವಿ ಮಾಡಿದ್ದರು

Tags:

error: Content is protected !!