Uncategorized

ಹೊಸ ವರ್ಷ ಆಚರಣೆ ಮಾಡಿದ ವಿರೇಂದ್ರ ಹೆಗ್ಗಡೆ..ರವಿಶಂಕರ್ ಗುರೂಜಿ ಕ್ಷಮೆ ಕೇಳಬೇಕು..ಪ್ರಮೋದ್ ಮುತಾಲಿಕ್

Share

ಧರ್ಮಸ್ಥಳ, ಇಸ್ಕಾನ್‍ನಲ್ಲಿ ಹೊಸ ವರ್ಷದ ಆಚರಣೆ ನೋವಿನ ಸಂಗತಿಯಾಗಿದೆ. ವೀರೇಂದ್ರ ಹೆಗ್ಗಡೆ ಇದಕ್ಕೆ ಕ್ಷಮೆ ಕೋರಬೇಕು. ರವಿಶಂಕರ್ ಗೂರುಜಿ ವೇಷ ಹಾಕಿಕೊಂಡು ಶುಭಾಶಯ ಕೋರಿದ್ದು ನಾಚಿಕೆಗೇಡು. ಮುಂದಿನ ವರ್ಷ ಆಚರಣೆ ಮಾಡಲ್ಲ ಎಂದು ಹೇಳಬೇಕು ಇಲ್ಲವಾದಲ್ಲಿ ದೇವಾಲಯ, ಮಠದ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಮಠ, ದೇವಾಲಯದಲ್ಲಿ ಹೊಸ ವರ್ಷದ ಆಚರಣೆ ವಿಚಾರ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದ್ ಮುತಾಲಿಕ್ ಜ.1ರಂದು ಹೊಸ ವರ್ಷ ನಮ್ಮದಲ್ಲ ಅಂತ ಎಲ್ಲರಿಗೂ ಗೊತ್ತಿದೆ. ದುರ್ದೈವದ ಸಂಗತಿ ಎಂದರೇ ಅನೇಕ ದೇವಾಲಯಗಳಲ್ಲಿ ಹೊಸ ವರ್ಷ ಆಚರಣೆ ಮಾಡಲಾಗಿದೆ. ಇದು ಮತಾಂತರಕ್ಕೆ ಪ್ರೇರಣೆ ನೀಡಿದಂತೆ ಆಗಿದೆ. ಪಾದ್ರಿಗಳು ಇದನ್ನು ಹಿಡಿದು ಪ್ರಚಾರ ನಡೆಸುತ್ತಿದ್ದಾರೆ. ಮುಂದಿನ ಹರ್ಷ ಹೊಸ ವರ್ಷ ಆಚರಿಸುವುದಿಲ್ಲ ಎಂದು ವಿರೇಂದ್ರ ಹೆಗ್ಗಡೆ, ರವಿಶಂಕರ್ ಗುರೂಜಿ ಹೇಳಬೇಕು ಇಲ್ಲದಿದ್ದರೆ ಅವರ ಮಠಗಳ ಮುಂದೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

: ರಾಜ್ಯದಲ್ಲಿ ಗೋ ಹತ್ಯೆ ನಿμÉೀಧ ಜಾರಿ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್ ಕಾನೂನಿನಲ್ಲಿ ಕೆಲ ಒಳ್ಳೆಯ ಅಂಶಗಳಿವೆ. ಅದೇ ರೀತಿ ಕೆಲವೊಂದು ಲೋಪಗಳು ಸಹ ಇವೆ. ಕಸಾಯಿ ಖಾನೆಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. 13 ವರ್ಷದ ಮೇಲ್ಪಟ್ಟ ಗೋವುಗಳ ಹತ್ಯೆಗೆ ಅವಕಾಶ ನೀಡಿರುವುದು ಸರಿಯಾದ ಕ್ರಮ ಅಲ್ಲ ಬ್ಯಾನ್ ಅಂದ್ರೆ ಸಂಪೂರ್ಣ ಬ್ಯಾನ್ ಮಾಡಬೇಕು. ರಫ್ತು ಸಹ ಸಂಪೂರ್ಣ ಬ್ಯಾನ್ ಆಗಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಯಿಸಿದ ಪ್ರಮೋದ್ ಮುತಾಲಿಕ್ ಈ ಸಂಬಂಧ ರಾಜ್ಯ ನಾಯಕರನ್ನು ಭೇಟಿ ಮಾಡಲಾಗುತ್ತಿದೆ. ರಾಜ್ಯ ನಾಯಕರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ನೋಡೊಣ ನಮ್ಮ ಯೋಗಾ ಏನಿದೆ ಅಂತಾ. ಆದ್ರೆ ಬಿಜೆಪಿ ಟಿಕೆಟ್ ಸಿಗದೇ ಇದ್ರೆ ಸ್ಪರ್ಧೆ ಮಾಡಲ್ಲ. ಬೆಳಗಾವಿ ಜಿಲ್ಲೆಗೆ ಅಮಿಶ್ ಶಾ ಭೇಟಿ ವೇಳೆ ಅವರನ್ನು ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಮೂಲಕ ಭೇಟಿಗೆ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಮೀನಾಮೇಷ ಎಣಿಸುತ್ತಿರೋದು ಖಂಡನಿಯ. ಕರ್ನಾಟಕದಲ್ಲಿ 26 ಹಿಂದುಗಳ ಕೊಲೆ ಆಗಿದೆ. 9 ಕೊಲೆಗಳಲ್ಲಿ ಪಿಎಫ್‍ಐ, ಎಸ್‍ಡಿಪಿಐ ಕಾರ್ಯಕರ್ತರ ಹೆಸರಿದೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು.
ಒಟ್ಟಾರೆ ಹಲವು ವಿಚಾರಗಳ ಕುರಿತು ಬೆಳಗಾವಿಯಲ್ಲಿ ಪ್ರಮೋದ್ ಮುತಾಲಿಕ್ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

 

 

Tags:

error: Content is protected !!