Belagavi

ಹೈಕಮಾಂಡ್ ಹೇಳಿದ್ರೆ ಮಂತ್ರಿಯಾಗ್ತೇನೆ, ಅಭಿವೃದ್ಧಿ ಮಾಡಿ ತೋರಿಸ್ತೇನೆ: ಶಾಸಕ ಉಮೇಶ ಕತ್ತಿ

Share

ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮಂಗಳವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ ಕತ್ತಿ, ಹೈಕಮಾಂಡ್ ಮನಸ್ಸು ಮಾಡಿದ್ರೆ ನಾನು ಮಂತ್ರಿಯಾಗುತ್ತೇನೆ. ಮಂತ್ರಿಸ್ಥಾನ ಸಿಕ್ಕರೆ ಒಳ್ಳೆ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ನಾಳೆ ಸಂಪುಟ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ.

ಈ ಹಿನ್ನೆಲೆಯಲಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಶಾಸಕ ಉಮೇಶ್ ಕತ್ತಿ ಬೆಂಗಳೂರಿಗೆ ಪ್ರಯಾಣ ಬೆಳಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಶಾಸಕ ಉಮೇಶ ಕತ್ತಿ ಮಾತನಾಡಿ, ಒಂದೂವರೆ ವರ್ಷದಲ್ಲಿ ಮೂರನೇ ಬಾರಿಗೆ ಸಂಪುಟ ವಿಸ್ತರಣೆ ಆಗ್ತಿದೆ. ನಾಳೆ ಕೋರ್ ಕಮಿಟಿ ಮೀಟಿಂಗ್ ಇದೆ. ನಿನ್ನೆ ರಾತ್ರಿ ಮುಖ್ಯಮಂತ್ರಿ ಕರೆ ಮಾಡಿ ಬೆಂಗಳೂರಿಗೆ ಬಾ ಅಂತಾ ಹೇಳಿದ್ದಾರೆ. ಹಾಗಾಗಿ, ಬೆಂಗಳೂರಿಗೆ ಹೋಗುತ್ತಿದ್ದೇನೆ. ಹೈಕಮಾಂಡ್ ಮತ್ತು ಪಕ್ಷದ ವರಿಷ್ಠರು ಮನಸ್ಸು ಮಾಡಿದ್ರೆ, ನಾನು ಮಂತ್ರಿಯಾಗಿ ರಾಜ್ಯದ ಸೇವೆ ಮಾಡುತ್ತೇನೆ ಎಂದರು.

ವಾರದಲ್ಲಿ ಎರಡ್ಮೂರು ಬಾರಿ ಸಿಎಂ ಕರೆ ಮಾಡ್ತಾರೆ. ಏನು ಮಾತಾಡಿದ್ದಾರೆ ಅಂತೆಲ್ಲಾ ಹೇಳಲಿಕ್ಕೆ ಬರೋದಿಲ್ಲ. ಮಂತ್ರಿಸ್ಥಾನ ಸಿಕ್ಕರೆ ಒಳ್ಳೆ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ. ಎಂಟು ಬಾರಿ ಶಾಸಕನಾಗಿ ಮೂರು ಬಾರಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ, ಪಕ್ಷ ಯಾವುದೇ ಜವಾಬ್ದಾರಿ ನೀಡಿದ್ರೂ ನಿಭಾಯಿಸಲು ಸಿದ್ಧನಿದ್ದೇನೆ ಎಂದರು.

ಒಟ್ಟಿನಲ್ಲಿ ಈ ಬಾರಿ ಹುಕ್ಕೇರಿ ಶಾಸಕ ಉಮೇಶ ಕತ್ತಿ ನಗು ನಗುತ್ತಲೇ ಬೆಂಗಳೂರು ವಿಮಾನ ಏರಿದ್ದಾರೆ. ಶಾಸಕ ಉಮೇಶ ಕತ್ತಿ ಅವರಿಗೆ ಲಕ್ ಕುದುರಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ.

Tags:

error: Content is protected !!