Nippani

ಹುನ್ನರಗಿ ಸ್ಮಶಾನದಲ್ಲಿ ಮಗುವಿಗೆ ಭೀಮರಾವ್ ಅಂತಾ ನಾಮಕರಣ ಮಾಡಿದ ಸತೀಶ ಜಾರಕಿಹೊಳಿ

Share

ಸ್ಮಶಾನ ಎಂದರೆ ಎಲ್ಲರೂ ಹೆದರುತ್ತಾರೆ. ಆದರೆ ಸ್ಮಶಾನದಲ್ಲಿ ಹಸುಗೂಸಿಗೆ ನಾಮಕರಣ ಮಾಡೋದು ಎಂದರೆ ನೀವು ನಂಬುತ್ತಿರಾ..? ನೀವು ನಂಬಲೇಬೇಕು ಇಂತಹ ಅಪರೂಪದ ಘಟನೆಗೆ ಇಲ್ಲೊಂದು ಕುಟುಂಬ ಸಾಕ್ಷಿಯಾಗಿದೆ. ಇನ್ನು ಇದಕ್ಕೆ ಅಪರೂಪದ ರಾಜಕಾರಣಿಯೊಬ್ಬರು ಕೂಡ ಸಾಕ್ಷಿಯಾಗಿದ್ದಾರೆ. ಇದು ಅಲ್ಲಿ ಅಂತೀರಾ ಹಾಗಾದ್ರೆ ಈ ಸುದ್ದಿ ನೋಡಿ..
ಸ್ಮಶಾನದಲ್ಲಿ ಮಗುವಿಗೆ ಭೀಮರಾವ್ ಎಂದು ನಾಮಕರಣ

ಎಲ್ಲಿ ನೋಡಿದ್ರೂ ಹಬ್ಬದ ವಾತಾವರಣ ಸುತ್ತಲೂ ಸಂಭ್ರಮ ಸಡಗರ..ಮಗುವಿಗೆ ನಾಮಕರಣ ಮಾಡಲು ಆಗಮಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ..ಹೌದು ನೀವು ನೋಡುತ್ತಿರುವ ಈ ದೃಶ್ಯ ಕಂಡು ಬಂದಿದ್ದು ನಿಪ್ಪಾಣಿ ತಾಲೂಕಿನ ಹುನ್ನರಗಿ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತ ಬಾಳು ಬರಗಾಲೆಯವರ ಮೊಮ್ಮಗನಿಗೆ ಹೆಸರಿಡುವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ..ಈ ವೇಳೆ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕರು, ಮೂಢನಂಬಿಕೆಗಳ ವಿರುದ್ಧ ಬಹು ದೊಡ್ಡ ಹೋರಾಟವನ್ನು ಕೈಗೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ಸತೀಶ ಜಾರಕಿಹೊಳಿ ಅವರು ಇದೀಗ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಬಾಳು ಬರಗಾಲೆಯವರ ಮೊಮ್ಮಗನಿಗೆ ಸ್ಮಶಾನದಲ್ಲಿಯೇ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಭೀಮರಾವ್ ಎಂದು ಮಗುವಿಗೆ ನಾಮಕರಣ ಮಾಡಲಾಯಿತು.

ಈ ವೇಳೆ ಮಾತನಾಡಿದ ಸತೀಶ ಜಾರಕಿಹೊಳಿ 21ನೇ ಶತಮಾನದಲ್ಲಿಯೂ ಕೂಡ ಪುರೋಹಿತಶಾಹಿಗಳು ಸಮಾಜದಲ್ಲಿ ಮೂಢ ನಂಬಿಕೆ ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದಾರೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸ್ಮಶಾನದಲ್ಲಿ ಮಗುವಿಗೆ ನಾಮಕರಣ ಮಾಡುವ ಮೂಲಕ ಮೂಢನಂಬಿಕೆಗಳನ್ನು ಮೆಟ್ಟು ನಿಲ್ಲುವ ಕೆಲಸ ಆಗಿದೆ. ಇದೇ ರೀತಿ ಪ್ರತಿಯೊಬ್ಬರು ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡುವ ಕೆಲಸ ಆಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಯುವ ಧುರೀಣ ಉತ್ತಮ ಪಾಟೀಲ ಸೇರಿದಂತೆ ಮಾನವ ಬಂಧುತ್ವ ವೇದಿಕೆಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಒಟ್ಟಾರೆ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದಲ್ಲಿ ಸ್ಮಶಾನದಲ್ಲಿ ಮಗುವಿಗೆ ನಾಮಕರಣ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಿದ್ದು ಸಧ್ಯ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

Tags:

error: Content is protected !!