ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಕರ್ನಾಟಕದ ಬೆಳಗಾವಿಗೆ ಬರುತ್ತಿದ್ದ ಮಹಾರಾಷ್ಟ್ರ ರಾಜ್ಯದ ಆರೋಗ್ಯ ಮಂತ್ರಿಯನ್ನು ಕರ್ನಾಟಕ ಪೋಲಿಸರು ಗಡಿಯಲ್ಲಿ ತಡೆದು ವಾಪಸ್ ಕಳುಹಿಸಿದರು.
ಪ್ರತಿ ವರ್ಷ ದಂತೆ ಈ ವರ್ಷವೂ ಬೆಳಗಾವಿ ಹಾಗೂ ನಿಪ್ಪಾಣಿಯಲ್ಲಿ ಹುತಾತ್ಮ ದಿನಾಚರಣೆ ಆಚರಣೆ ಮಾಡಲು ಬರುತ್ತಿದ್ದ ಮಹಾರಾಷ್ಟ್ರ ರಾಜ್ಯದ ಆರೋಗ್ಯ ಮಂತ್ರಿ ರಾಜೇಂದ್ರ ಶಾಮರಾವ್ ಯಡ್ರಾವಕರ ಅವರನ್ನು ಕರ್ನಾಟಕ ಪೊಲೀಸರು ನಿಪ್ಪಾಣಿ ಬಳಿ ಕೋಗನೋಳಿ ಟೋಲ್ ನಾಕಾ ಬಳಿ ಭಾನುವಾರ ತಡೆದು ವಾಪಸ್ ಕಳುಹಿಸಿದರು. ಜನವರಿ ೧೭ ರಂದು ಪ್ರತಿ ವರ್ಷ ದಂತೆ ಹುತಾತ್ಮ ದಿನಾಚರಣೆ ಮಾಡಲು ಇವರೆಲ್ಲ ನಿಪ್ಪಾಣಿ ಮೂಲಕ ಬೆಳಗಾವಿಗೆ ಬರುತ್ತಿದ್ದರು. ಇವರನ್ನು ನಿಪ್ಪಾಣಿ ಗ್ರಾಮೀಣ ಠಾಣೆಯ ಪೊಲೀಸರು ತಡೆದು ಸಚಿವರನ್ನು ವಾಪಸ್ ಕಳುಹಿಸಿದರು.
ಈ ಸಂದರ್ಭದಲ್ಲಿ ೩೦ ಜನರು ಬೆಳಗಾಂವ್ ಕಾರವಾರ್ ನಿಪ್ಪಾಣಿ ಬೀದರ್ ಬಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು ಎಂದು ಘೋಷಣೆ ಕೂಗಿದರು. ಕರ್ನಾಟಕ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ವಾಪಸ್ ಮಹಾರಾಷ್ಟ್ರ ರಾಜ್ಯಕ್ಕೆ ತೆರಳಿದರು.