Uncategorized

ಹುಡುಗಿ ಚುಡಾಯಿಸಿದ ಯುವಕನಿಗೆ ಸಾರ್ವಜನಿಕರಿಂದಲೇ ಗೂಸಾ

Share

ಬೆಳಗಾವಿ ಬಾಪಟ್‌ಗಲ್ಲಿಯಲ್ಲಿ ಭಾನುವಾರ ಮಧ್ಯಾಹ್ನ ಹುಡುಗಿಯೊಬ್ಬಳನ್ನು ಚುಡಾಯಿಸಿದ ಯುವಕನಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಬೆಳಗಾವಿ ಬಾಪಟ್‌ಗಲ್ಲಿ ಮೂಲಕ ತೆರಳುತ್ತಿದ್ದ ಹುಡುಗಿಯೊಬ್ಬಳನ್ನು ಯುವಕನೊಬ್ಬ ಚುಡಾಯಿಸಿದ. ಅಶ್ಲೀಲ ಶಬ್ದ ಬಳಸಿ ಮಾತನಾಡಿದ. ಆದರೆ ಬೆಚ್ಚಿ ಬಿದ್ದ ಹುಡುಗಿ ಏನೊಂದು ಮಾತನಾಡದೇ ಮುಂದೆ ನಡೆದಳು. ಕೂಡಲೇ ಎಚ್ಚೆತ್ತುಕೊಂಡ ಸಾರ್ವಜನಿಕರು ಯುವಕನನ್ನು ಹಿಡಿದು ಧರ್ಮದೇಟು ನೀಡಿದರು. ಹಿಗ್ಗಾ ಮುಗ್ಗಾ ಜಾಡಿಸಿ ಬೆವರಿಳಿಸಿದರು. ಸುದ್ದಿ ತಿಳಿದ ಯುವಕರು ಸ್ಥಳದಲ್ಲಿ ಗುಂಪುಗೂಡಿ, ಹುಡುಗಿಯ ಜೊತೆಗೆ ಅಸಭ್ಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

https://www.youtube.com/watch?v=PxlmLQb4uTI&feature=youtu.be

ಸಾರ್ವಜನಿಕ ಸ್ಥಳದಲ್ಲಿ ಹುಡುಗಿ ಚುಡಾಯಿಸುವ ಪ್ರವೃತ್ತಿಯವರಿಗೆ ತಕ್ಕ ಪಾಠ ಕಲಿಸಿದಂತಾಗಿದೆ ಎಂದು ಸ್ಥಳದಲ್ಲಿ ಸೇರಿದವರು ಮಾತನಾಡಿದರು. ಚುಡಾಯಿಸಿದ ಹುಡುಗ ಕೊನೆಯವರೆಗೂ ತನ್ನ ಹಠಮಾರಿ ಧೋರಣೆಯಿಂದ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದು ಗಮನ ಸೆಳೆಯಿತು.

Tags:

error: Content is protected !!