Hukkeri

ಹುಕ್ಕೇರಿ : ಹುಕ್ಕೇರಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಉಮೇಶ ಕತ್ತಿ

Share

ಹುಕ್ಕೇರಿ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಗಳನ್ನು ಶಾಸಕ ಉಮೇಶ ಕತ್ತಿ ಚಾಲನೆ ನೀಡಿದರು.ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ ಇಂಜಿನೀಯರಿಂಗ್ ಇಲಾಖೆ ವತಿಯಿಂದ ಸುಮಾರು 13 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಣಗಲಾ, ಎಲಿಮುನ್ನೋಳ್ಳಿ, ಬಾಡ, ಬಸ್ತವಾಡ,ಬೆಲ್ಲದ ಬಾಗೆವಾಡಿ, ಯರಗಟ್ಟಿ, ಗೌಡವಾಡ, ಬಾಡ,ರಾಶಿಂಗ,ಕೋಣಕೇರಿ ಗ್ರಾಮಗಳಲ್ಲಿಯ ರಸ್ತೆ, ಸಮುದಾಯ ಭವನ, ದೇವಸ್ಥಾನಗಳ ಜಿರ್ಣೋದ್ದಾರ ಹಾಗೂ ದಲಿತರು ವಾಸಿಸುವ ಸ್ಥಳಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಸೆರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹುಕ್ಕೇರಿ ಶಾಸಕ ಉಮೇಶ ಕತ್ತಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಮಾರ್ಚ 2021 ರ ವಳಗೆ ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ ಹಾಗೂ ಗ್ರಾಮ ಪಂಚಾಯತಿಗಳ ಅದ್ಯಕ್ಷ ನಾನೆ ಇರುವದರಿಂದ ಕಳೆದ ಎರಡು ದಿನಗಳಲ್ಲಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿಯ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ ಮುಂಬರುವ ದಿನಗಳಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ನೀಡಲು ನಿರ್ಧರಿಸಲಾಗಿದೆ ಪ್ರತಿ ಮನೆಗೆ ವೆಚ್ಚದ ಶೇಕಡಾ 10 ರಷ್ಟು ಫಲಾನಿಭವಿಗಳು ಭರಿಸಬೇಕಾಗುತ್ತದೆ , ಒಂದು ವರ್ಷದ ನಂತರ ಫಲಾನುಭವಿಗಳು ತುಂಬಿದ ಹಣ ವಾಪಸ್ ನೀಡಲಾಗುವದು ಎಂದರು,

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಎಸ್ ಕೆ ಹುಕ್ಕೇರಿ, ಜಿಲ್ಲಾ ಪಂಚಾಯತ ಅಭಿಯಂತರ ಎ ಬಿ ಪಟ್ಟಣಶೆಟ್ಟಿ, ಭಾರತೀಯ ಜನತಾ ಪಕ್ಷದ ವಿವಿಧ ಘಟಕದ ಮುಖಂಡರಾದ ರಾಜೇಂದ್ರ ಪಾಟೀಲ, ಅಮರ ನಲವಡೆ, ಪರಗೌಡಾ ಪಾಟೀಲ, ರಾಚಯ್ಯಾ ಹಿರೇಮಠ, ಅಶೋಕ ಹಿರೇಕೋಡಿ, ಜಯಗೌಡಾ ಪಾಟೀಲ್, ಶಶಿರಾಜ ಪಾಟೀಲ್, ಜಿಲ್ಲಾ ಪಂಚಾಯತ ಸದಸ್ಯೆಯರಾದ ಅನಸೂಯಾ ಪಾಟೀಲ,ಅಣ್ಣಪೂರ್ಣಾ ಮಾಳಗೆ ಹಾಗೂ ನೂತನ ಗ್ರಾಮ ಪಂಚಾಯತಿ ಸದಸ್ಯರುಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!