ಅಲ್ಲಿ ನಡೆದಿರುವದು ಮದುವೆಯ ಆರಕ್ಷತೆ ಕಾರ್ಯಕ್ರಮ ಆದರೆ ಪುರೋಹಿತರು ಇಲ್ಲಾ, ವಾಲಗದವರು ಇಲ್ಲಾ, ಯಾವದೆ ಅಡಂಬರ ವಿಲ್ಲಾ ಕೇವಲ ಕನ್ನಡಾಭಿಮಾನಿಗಳು ಮತ್ತು ಸಾಹಿತಿಗಳ ನಡುವೆ ಆರತಕ್ಷತೆ ಜರುಗಿದೆ..
ಅದು ಎಲ್ಲಿ ಅಂತಿರಾ ಬನ್ನಿ ನೋಡೊಣ…
ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ನೆಸರಿ ಗಾರ್ಡನ್ ಕನ್ನಡ ದ್ವಜಗಳಿಂದ ಶಿಂಗಾರಗೊಂಡದೆ ಎಲ್ಲಿ ನೊಡಿದಲ್ಲಿ ಕನ್ನಡ ಭಾವುಟ ವಿಶಾಲವಾದ ಕೆ ಎಸ್ ನರಸಿಂಹಸ್ವಾಮಿ ವೇದಿಕೆ. ವೇದೀಕೆ ಮೇಲೆ ನಿಡಸೋಸಿ ಜಗದ್ಗುರುಗಳ ಸಿಹಾಂರೊಹಣ ಅವರ ಪಕ್ಕದಲ್ಲಿ ನಾಡಿನ ಹೆಸರಾಂತ ಸಾಹಿತಿಗಳು ಮತ್ತು ನವ ವಧುಗಳ ಉಪಸ್ಥಿತಿ. ಇದು ಆರತಕ್ಷತೆಯ ಕಾರ್ಯಕ್ರಮವೋ ಅಥವಾ ಕನ್ನಡ ಸಾಹಿತ್ಯ ಸಮ್ಮೇಳನವೋ ಎಂಬುವ ಗೊಂದಲದಲ್ಲಿ ಜನರು.
ಇದು ಅಪ್ಪಟ ಕನ್ನಡ ಅಭಿಮಾನಿ ಕುಮಾರ ಸಂದ್ಯಾ ರವರ ಆರತಕ್ಷತೆ ಕಾರ್ಯಕ್ರಮ ಇದು ವಿನೂತನವಾಗಿ ಜರುಗಿದೆ.ವಿಶ್ವಕನ್ನಡ ರಕ್ಷಕ ದಳದ ಸಚಾಲಕ ಸೊಲಾಪುರದ ಕುಮಾರ ತಳವಾರ ತನ್ನ ಮದುವೆ ಕಾರ್ಯಕ್ರಮವನ್ನು ದಾಂಪತ್ಯ ಸಾಂಗತ್ಯ ಎಂಬ ಶೀರ್ಷಿಕೆ ಅಡಿ ಪುಸ್ತಕ ಬಿಡುಗಡೆ,ದಾಂಪತ್ಯ ಕವಿಗೋಷ್ಟಿ, ಕನ್ನಡಪರ ಹೋರಾಟ ಸಂಕಥನ ಗೋಷ್ಟಿ ಹಾಗೂ ಸಾವಿತ್ರಿಭಾಯಿ ಫುಲೆ ಜಯಂತಿ ಮಾಡುವ ಮೂಲಕ ವಿನೂತನವಾಗಿ ಆಚರಿಸಲಾಯಿತು.
ನಿಡಸೋಸಿ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ನೂತನ ವಧು ವರರನ್ನು ಆಶಿರ್ವದಿಸಿ ಮಾತನಾಡಿ ಯಾವದೆ ಅಡಂಬರ ವಿಲ್ಲದೆ ಸರಳವಾಗಿ ಕುಮಾರ್ ಸಂಧ್ಯಾ ರವರು ತಮ್ಮ ಆರತಕ್ಷತೆಯನ್ನು ಸಂಪೂರ್ಣ ಸಾಹಿತ್ಯದ ವಲವಿನೊಂದಿಗೆ ದಾಂಪತ್ಯ ಜೀವನದ ಬಗ್ಗೆ ಕವಿಗೋಷ್ಟಿ ಮಾಡುವ ಮೂಲಕ ಆದರ್ಶ ಪ್ರಾಯರಾಗಿದ್ದಾರೆ ಎಂದರು ,
ಬೆಳಗಾವಿ ಜಿಲ್ಲೆಯ ವಿವಿಧ ಕನ್ನಡ ಪರ ಸಂಘಟನೆಯ ಮುಖಂಡರಾದ ಮಹಾಂತೇಶ ರಣಗಟ್ಟಿಮಠ,ರಾಜು ನಾಶಿಪುಡಿ, ದೀಲಿಪ ಹೋಸಮನಿ,ದೀಪಕ ಗುಡಗನಟ್ಟಿ, ಪ್ರಮೋದ ಹೊಸಮನಿ, ವಿಕ್ರಂ ಕರನಿಂಗ ನೂತನ ಕನ್ನಡ ಪ್ರೇಮಿ ದಂಪತಿಗಳಿಗೆ ಶುಭ ಹಾರೈಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಕುಮಾರ ಸಂಧ್ಯಾ ದಂಪತಿಗಳು ಗಡಿಭಾಗದಲ್ಲಿ ಕನ್ನಡ ಉಳುವಿಗಾಗಿ ಈ ಭಾಗದ ಜನರಿಗೆ ಜಾಗ್ರತೆ ಮೂಡಿಸುವು ಹಾಗೂ ಕನ್ನಡತನದ ಅಸ್ಮಿತೆಯಿಂದ ನಮ್ಮತನ ಕಾಪಾಡುವ ಉದ್ದೇಶದಿಂದ ಇಂದು ಚಿಕ್ಕ ಸಾಹಿತ್ಯ ಸಮ್ನೇಳನ ಮಾಡುವ ಮೂಲಕ ನನ್ನ ಬಾಳಸಂಗಾತಿಯನ್ನು ವರರಸಿಕೊಂಡುದ್ದೆನೆ ಎಂದರು ( )
ನೂತನ ವಧು ಸಂಧ್ಯಾ ಮಾತನಾಡಿ ಅವರಿಗೆ ಕನ್ನಡ ಮೇಲೆ ಇದ್ದ ಪ್ರೀತಿ ನೋಡಿ ನಾನು ಅವರ ಜೋತೆ ಕೈ ಜೋಡಿಸಿದ್ದೆನೆ ಮುಂದೆ ಅವರ ಕನ್ನಡ ಪರ ಹೋರಾಟದಲ್ಲಿ ನಾನು ಬೆನ್ನೆಲುಬುವಾಗಿ ಕಾರ್ಯನಿರ್ವಹಿಸುವೆ ಎಂದರು,
ಈ ಸಂದರ್ಭದಲ್ಲಿ ಸಾಹಿತಿಗಳಾದ ಅಕಬರ ಸನದಿ, ನಾಗೇಶ ನಾಯಿಕ, ವೀರಣ್ಣಾ ಮಡಿವಾಳಕರ, ಮಹಾದೇವ ಕುಂಬಾರ, ಶ್ರೀಶೈಲ್ ಮಠಪತಿ, ಎಲ್ ವಿ ಪಾಟೀಲ ಮೊದಲಾದ ಸಾಹಿತಿಗಳು ದಾಂಪತ್ಯ ಮತ್ತು ಕನ್ನಡ ಹೋರಾಟ ಮತ್ತು ಕುಟುಂಬ ನಿರ್ವಹಣೆ ಸವಾಲುಗಳು ಎಂಬ ಗೋಷ್ಠಿಗಳನ್ನು ನಡೆಸಿದರು.
ಬೆಳವಿಯ ಶರಣಬಸವ ದೇವರು ಅಕ್ಷರದ ಅವ್ವ ಸಾವಿತ್ರಿ ಭಾಯಿ ಫುಲೆ ಯವರ ಜಯಂತಿಯನ್ನು ಆಚರಿಸಿ ಮಾತನಾಡಿ ದೇಶಿಯ ಭಾಷೆ ದೂರುಮಾಡಿ ಪಾಶ್ಚಿಮಾತ್ಯ ಸಂಸ್ಕ್ರತಿಯ ಪ್ರಭಾವಕ್ಕೆ ಒಳಗಾಗಿ ಇಂದು ಕನ್ನಡ ನೆಲದಲ್ಲಿ ಕನ್ನಡಕ್ಕೆ ಅನ್ಯಾಯವಾಗುವ ಸಂದರ್ಭದಲ್ಲಿ ಕುಮಾರ ಸಂಧ್ಯಾರವರು ನಮಗೆ ಬಾಳು ಕೋಟ್ಟ ಕನ್ನಡ ನೆಲದಲ್ಲಿ ಕನ್ನಡ ಸಂಸ್ಕೃತಿಯ ಝೆಂಕಾರ ವಾಗಲಿ ಎಂದು ಸಾವಿತ್ರಿ ಭಾಯಿ ಫುಲೆರವರ ಜಯಂತಿ ಆಚರಿಸುವ ಮೂಲಕ ಮದುವೆಯ ಆರತಕ್ಷತೆ ಮಾಡಿರುವದು ಎಲ್ಲಾ ಕನ್ನಡಿಗರಿಗೆ ಆದರ್ಶಮಯ ವಾಗಿದಗದಾರೆ ಎಂದರು ,
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಸಾಹಿತಿಗಳು,ಕನ್ನಡಾಭಿಮಾನಿಗಳು,ವಿಶ್ವ ಕನ್ನಡ ರಕ್ಷಕ ದಳದ ಕಾರ್ಯಕರ್ತರು ಉಪಸ್ಥಿತರಿದ್ದರು.