Uncategorized

ಹುಕ್ಕೇರಿ : ಯುವಕರು ದೇಶದ ಅಭಿಮಾನ ಮರೆಯಬಾರದು – ನಿಡಸೋಸಿ ಜಗದ್ಗುರುಗಳು.

Share

ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದಲ್ಲಿ ಭಾರತೀಯ ಸ್ಯೆನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರಿಗೆ ಅಭಿನಂದನೆ ಕಾರ್ಯಕ್ರಮ ಜರುಗಿತು.

ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಆವರಣದಲ್ಲಿ ನಿಡಸೋಸಿ ಸಿದ್ದಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಕುರಣಿ ಅಡವಿ ಸಿದ್ದೇಶ್ವರ ಮಠದ ಯೋಗ ಗುರು ಮಲ್ಲಿಕಾರ್ಜುನ ದೇವರ ಸಮ್ಮುಖದಲ್ಲಿ ಜರುಗಿದ ಕಾರ್ಯಕ್ರಮ ದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತಿಚಿಗೆ ನಿವೃತ್ತಿ ಹೊಂದಿದ ಅಮ್ಮಣಗಿ ಗ್ರಾಮದ ಯೋಧರಾದ ರಾಷ್ಟ್ರಪತಿಗಳ ಸೇನಾ ಮೇಡಲ್ ಪುರಸ್ಕ್ರತ ಹಾಗೂ ಮೌಂಟ ಎವರೇಸ್ಟ ಏರಿದ ಸುಭೇದಾರ ಮೇಜರ ದಯಾನಂದ ಢಾಳಿ ಮತ್ತು ರಾಷ್ಟ್ರಪತಿಗಳ ಸೇನಾ ಮೇಡಲ್ ಪುರಸ್ಕೃತ ರಾದ ಸಂಜಯ ಪೂಜೇರಿ ಹಾಗೂ ಸುನೀಲ ಬಾಬು ಹುದ್ದಾರ ಇವರನ್ನು ಶ್ರೀಗಳು ಮತ್ತು ಗಣ್ಯರು ಅಮ್ಮಣಗಿ ಗ್ರಾಮಸ್ಥರ ಪರವಾಗಿ ಆತ್ಮಿಯವಾಗಿ ಸತ್ಕರಿಸಿ ಅಭಿನಂದಿಸಿದರು.

ವೇದಿಕೆ ಮೇಲೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾ, ಕೆ ಶಿವಣ್ಣ, ಹುಬ್ಬಳ್ಳಿಯ ವೈದ್ಯ ರಾಮಚಂದ್ರ ಕಾರಟಗಿ, ರವಿಕಿರಣ ಕಮಲಾಕರ, ಚಿಕ್ಕೋಡಿ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಆನಂದ ಆರ್ವಾರೆ, ಅಜೀತ ವಾಳಕೆ, ಕಲಗೌಡಾ ನಾಗೌಡಾ ಉಪಸ್ಥಿತರಿದ್ದರು.
ಮಾದ್ಯಮಗಳೊಂದಿಗೆ ಮಾತನಾಡಿದ ನಿಡಸೋಸಿ ಶ್ರೀಗಳು ದೇಶದ ಇತಿಹಾಸದಲ್ಲಿ ಭಾರತೀಯ ಸೈನಿಕರಿಗೆ ವಿಶಿಷ್ಟವಾದ ಶಕ್ತಿ ಇದೆ, ಯುವಕರು ದೇಶದ ಅಭಿಮಾನ ಬೇಳೆಸಿಕೋಳ್ಳುವ ಉದ್ದೇಶದಿಂದ ಅಮ್ಮಣಗಿ ಗ್ರಾಮಸ್ಥರು ಇತ್ತಿಚಿಗೆ ನಿವೃತ್ತಿ ಹೊಂದಿದ ಯೋಧರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಯುವ ಜನಾಂಗಕ್ಕೆ ದೇಶ ಸೇವೆ ಮಾಡುವ ಭಾವನೆ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು ,

2007 ನೇ ಇಸ್ವಿಯಲ್ಲಿ ಮೌಂಟ ಎವರೇಸ್ಟ ಏರುವಾಗ ತನ್ನ ಕೈ ಬೇರಳನ್ನು ಕಳೆದುಕೊಂಡ ಸುಭೆದಾರ ದಯಾನಂದ ಢಾಳಿ ಯವರ ತಾಯಿ ಕಾಶಿಬಾಯಿಯನ್ನು ಇದೆ ಸಂದರ್ಭದಲ್ಲಿ ಸತ್ಕರಿಸಲಾಯಿತು.ಸತ್ಕಾರ ಸ್ವೀಕರಿಸುವಾಗ ತಾಯಿ ಮತ್ತು ಮಗನ ಕಣ್ಣಂಚಿನಲ್ಲಿ ನೀರು ಬರುವಾಗ ನೇರೆದ ಜನ ಗದ್ಗತೀತರಾದರು.

ಅಮ್ಮಣಗಿ ಗ್ರಾಮದ ಮುಖಂಡ ಮಾಜಿ ಸೈನಿಕ ಕಲಗೌಡಾ ನಾಗೌಡಾ ಮಾತನಾಡಿ ಇಂದಿನ ಬಾಲಕರು ನಾಳಿನ ನಾಗರಿಕರು ಎನ್ನುವಂತೆ ಯುವ ಜನಾಂಗಕ್ಕೆ ಸೈನ್ಯ ಸೇರಿ ದೇಶದ ಸೇವೆ ಮಾಡಲು ಪ್ರೇರೆಪಿಸುವ ಉದ್ದೇಶ ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ದೊಂದಿಗೆ ತರಬೇತಿ ನೀಡುವ ಕಾರ್ಯ ಅಮ್ಮಣಗಿ ಗ್ರಾಮದಲ್ಲಿ ಮಾಡಲಾಗುವದು ಎಂದರು,
ಈ ಸಂದರ್ಭದಲ್ಲಿ ಕಾರ್ಯಕ್ರಮ ನಿರೂಪಕರಾದ G K ಹಿರೇಮಠ ಗುರುಗಳು ಹಾಗೂ ಅಮ್ಮಣಗಿ ಗ್ರಾಮಸ್ಥರು ಮತ್ತು ನಿವೃತ್ತ ಸೈನೀಕ ಬಳಗದವರು ಉಪಸ್ಥಿತರಿದ್ದರು.

Tags:

error: Content is protected !!