Hukkeri

ಹುಕ್ಕೇರಿ : ಮೀಸಲಾತಿ ಪಡೆಯಲು ಹೋರಾಟ ಕ್ಕೆ ಅಣಿಯಾದ ಪಂಚಮಸಾಲಿ ಸಮಾಜ

Share

ಹುಕ್ಕೇರಿ ತಾಲೂಕಿನ ಲಿಂಗಾಯತ ಪಂಚಮಸಾಲಿ ಮಹಾಸಭೆ ಹುಕ್ಕೇರಿ ಘಟಕದ ಅದ್ಯಕ್ಷ ಶಿವನಗೌಡಾ ಪಾಟೀಲ ನೇತೃತ್ವದಲ್ಲಿ ಪಟ್ಟಣದ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ತಾಲೂಕಿನ ಲಿಂಗಾಯತ ಮತ್ತು ಪಂಚಮಸಾಲಿ ಸಮಾಜದ ಮುಖಂಡರ ಜರುಗಿತು.

ಸಭೆಯಲ್ಲಿ ಅಖಿಲ ಭಾರತ ಲಿಂಗಾಯತ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜವನ್ನ ೨ ಎ ಹಾಗೂ ಲಿಂಗಾಯತ ಬಡ ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರ್ಪಡೆ ಸುವಂತೆ ಒತ್ತಾಯಿಸಿ 2021 ಜನವರಿ 14 ರಂದು ಕೂಡಲಸಂಗಮ ದಿಂದ ಬೆಂಗಳೂರು ವಿಧಾನಸೌಧದವರಿಗೆ ಪಾದಯಾತ್ರೆ ಯಲ್ಲಿ ಹೆಚ್ಚನ ಸಂಖ್ಯೆಯಲ್ಲಿ ಸಮಾಜದವರು ಭಾಗವಹಿಸಿ ಪಾದಯಾತ್ರೆ ಯನ್ನು ಯಶಸ್ವಿಗೋಳಿಸಲು ತೀರ್ಮಾನಿಸಲಾಯಿತು.

ಮಾದ್ಯಮಗಳೊಂದಿಗೆ ಮಾತನಾಡಿದ ಮುಖಂಡ ವಿಜಯ ರವದಿ ಮತ್ತು ನೂತನ ಸಮಾಜದ ಅದ್ಯಕ್ಷ ಗುಂಡು ಪಾಟೀಲ ಲಿಂಗಾಯತ ಪಂಚಮಸಾಲಿ ಸಮಾಜದ ಬೇಡಿಕೆಗಳಾದ ೨ ಎ ಮತ್ತು ಓ ಬಿ ಸಿ ಮೀಸಲಾತಿಗಾಗಿ ಜಯಮೃತ್ಯುಂಜಯ ಮಹಾಸ್ವಾಮಿಗಳು ಜನೆವರಿ 14 ರಂದು ಕೂಡಲಸಂಗಮ ದಿಂದ ಹಮ್ಮಿಕೊಂಡ ಪಾದಯಾತ್ರೆಗೆ ಹುಕ್ಕೇರಿ ತಾಲೂಕಿನಿ ಪ್ರತಿ ಗ್ರಾಮಗಳಿಂದ ಸಹಸ್ರಾರು ಜನ ಪಾದಯಾತ್ರೆ ಯಲ್ಲಿ ಭಾಗವಹಿಸಿ ಶ್ರೀಗಳ ಹೋರಾಟಕ್ಕೆ ಬೆಂಬಲ ನಿಡಲಾಗುವದು ಎಂದರು ,

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವಿಜಯ ರವದಿ, ಬಸವರಾಜ್ ಪಾಟೀಲ್, ಚಂದು ಗಂಗನ್ನವರ, ರಾಜು ಮುನ್ನೋಳಿ ,ಚಂದ್ರಶೇಖರ್ ಪಾಟೀಲ್, ತಮ್ಮನ ಗೌಡ ಪಾಟೀಲ್, ಅಣ್ಣಗೌಡ ಪಾಟೀಲ್, ವಿರುಪಾಕ್ಷ ಅಲಗ ರಾವುತ, ಭೀಮಾನಂದ ಮುದುಕನ್ನವರ, ಶಂಕರ ನಾಯಕ, ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!