Hukkeri

ಹುಕ್ಕೇರಿ : ಬಂಡವಾಳಶಾಯಿ ಔಷಧಿ ಮಳಿಗೆಗಳಿಗೆ ಕಡಿವಾಣ ಹಾಕಿ – ಬಡವ ಅಜ ಕಲ್ಯಾಣಿ.

Share

ಹುಕ್ಕೇರಿ ನಗರದಲ್ಲಿ ನೂತನವಾಗಿ ಆರಂಭವಾಗಲಿರುವ ಅಪೋಲೊ, ವೇಲ್ ನೆಸ್ ಮತ್ತು ಮೇಡ್ ಪ್ಲಸ್ ಔಷಧಿ ಅಂಗಡಿ ಗಳಿಗೆ ನಿಯಂತ್ರಣ ಹಾಕಬೇಕು ಎಂದು ಔಷಧಿ ಅಂಗಡಿಗಳ ಮಾಲಿಕರು ಮಿನಿ ವಿಧಾನಸೌಧ ಎದುರು ಪ್ರತಿಭಟನೆ ಜರುಗಿಸಿದರು.

ನಗರದ ಔಷಧಿ ವ್ಯಾಪಾರಸ್ಥರ ಅಸೋಸಿಯೇಷನ್ ಅದ್ಯಕ್ಷ ಬಸವರಾಜ ಕಲ್ಯಾಣಿ ನೇತೃತ್ವದಲ್ಲಿ ನಡದ ಪ್ರತಿಭಟನೆ ನಡೆಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಕಲ್ಯಾಣಿ ಮತ್ತು ಬಸವರಾಜ ಕುಂಬಾರ ಮಾತನಾಡಿ ರಾಜ್ಯಾದ್ಯಂತ ಕಾರ್ಪೋರೇಟ್ ಕಂಪನಿಗಳು ಔಷಧಿ ಅಂಗಡಿಗಳನ್ನು ಸ್ಥಾಪಿಸುವ ಮೂಲಕ ಶೇಕಡಾ 10 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುವದರಿಂದ ನಮಗೆ ವ್ಯಾಪರ ಕುಂಟಿತವಾಗಿದೆ ಹಾಗೂ ನಾವು ಮಳಿಗೆಗಳನ್ನು ಬಂದ್ ಮಾಡುವದರಿಂದ ನಮ್ಮ ಕುಟುಂಬ ಬೀದಿಗೆ ಬರುತ್ತದೆ ಕಾರಣ ರಾಜ್ಯ ಸರ್ಕಾರ ಕಾರ್ಪೊರೇಟ್ ಔಷಧಿ ಅಂಗಡಿಗಳನ್ನು ಸ್ಥಾಪಿಸಲು ಕಡವಾಣ ಹಾಕ ಬೇಕು ಮತ್ತು ಸರ್ಕಾರದ ಮಾನದಂಡನೆ ಪ್ರಕಾರ ಹಾಗೂ ಜನಸಂಖ್ಯೆ ಆಧಾರದ ಮೇಲೆ ಅನುಮತಿ ನೀಡಬೇಕು ಎಂದು ಆಗ್ರಹಿಸಲಾಗುತ್ತಿದೆ ಎಂದರು ,

ನಂತರ ತಹಸಿಲ್ದಾರ ಗ್ರೇಡ 2 ಕಿರಣ ಬೇಳವಿಯವರಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಔಷಧಿ ವ್ಯಾಪಾರದ ಅಸೋಸಿಯೇಷನ್ ಸದಸ್ಯರಾದ ಸುನಿಲ ನಾಯಿಕ, ರಾಜು ಮುಚ್ಚಂಡಿ, ಲಲಿತಕುಮಾರ ಜಾಧವ, ರಾಜು ದೇಸಾಯಿ, ನಹಾಂತೇಶ ಮಾನವಿ, ಪ್ರವೀಣ ಹೊಸಮನಿ, ಅಜೀತ ಕುಂಬಾರ, ನಾಗರಾಜ ಢಂಗ, ಆರುಂಧತಿ ಸಬನೀಸ್, ಜಯಶ್ರೀ ಚಿರಂತಿಮಠ, ರಾಜೇಂದ್ರ ಕೋರತಿ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!