Hukkeri

ಹುಕ್ಕೇರಿ : ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದ ಕತ್ತಿ ಬೆಂಬಲಿಗರು

Share

ಹುಕ್ಕೇರಿ ಮತ ಕ್ಷೇತ್ರದ ಶಾಸಕ ಉಮೇಶ ಕತ್ತಿ ಇಂದು ರಾಜ್ಯ ಸಚಿವ ಸಂಪುಟದಲ್ಲಿ ಸೇರ್ಪಡೆ ಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಹುಕ್ಕೇರಿ ಮತ್ತು ಸಂಕೇಶ್ವರ ನಗರದಲ್ಲಿ ಉಮೇಶ ಕತ್ತಿ ಬೆಂಬಲಿಗರು ಪಟಾಕಿ ಸಿಡಿಸಿ ಹರ್ಷ ವ್ಯಕ್ತ ಪಡಿಸಿದರು.

ಸಂಕೇಶ್ವರ ನಗರದ ಚನ್ನಮ್ನಾ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಹುಕ್ಕೇರಿ ನಗರದ ಕೋರ್ಟ್ ಸರ್ಕಲ್ ಮತ್ತು ಹಳೆ ಬಸ್ ನಿಲ್ದಾಣದಲ್ಲಿ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ನರೇಂದ್ರ ಮೋದಿ , ಅಮಿತ ಷಾ ಮತ್ತು ಯಡಿಯೂರಪ್ಪ ಪರ ಘೋಷನೆ ಕೂಗಿ ಹರ್ಷ ವ್ಯಕ್ತ ಪಡಿಸಿದರು.

ಮಾದ್ಯಮಗಳೊಂದಿಗೆ ಮಾತನಾಡಿದ ಪುರಸಭೆ ಸದಸ್ಯ ರಾಜು ಮುನ್ನೋಳಿ ಮುಖ್ಯಮಂತ್ರಿ ಗಳಾ ಯಡಿಯೂರಪ್ಪ ರವರು ಕೊಟ್ಟ ಮಾತಿನಂತೆ ಉಮೇಶ ಕತ್ತಿ ಯವರಿಗೆ ಸಚಿವ ಸ್ಥಾನ ನೀಡುವ ಮೂಲಕ‌ ಗೌರವ ನೀಡಿದ್ದಾರೆ ಅವರಿಗೆ ಹುಕ್ಕೇರಿ ಮತ ಕ್ಷೇತ್ರದ ಜನತೆ ಮತ್ತು ಬಿ ಜೇ ಪಿ ಕಾರ್ಯಕರ್ತರಿಂದ ಅಭಿನಂದನೆ ಸಲ್ಲಿಸಲಾಗುವದು ಎಂದರು ,

ಭಾರತೀಯ ಜನತಾ ಪಕ್ಷದ ನಿರ್ಗಮಿತ ಬ್ಲಾಕ್ ಅದ್ಯಕ್ಷ ಪರಗೌಡಾ ಪಾಟೀಲ ಮಾತನಾಡಿ ಕಳೆದ 8 ಬಾರಿ ಶಾಸಕರಾಗಿ, ಸಚಿವರಾಗಿ ಹಲವಾರು ಖಾತೆ ನಿಭಾಯಿಸಿದ ಹಿರಿಯ ರಾದ ಉಮೇಶ ಕತ್ತಿಯವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ ನಾಡಿನ ಸೇವೆಗೆ ಅವಕಾಶ ಮಾಡಿ ಕೋಟ್ಟ ಭಾರತೀಯ ಜನತಾ ಪಕ್ಷದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರಿಗೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ಕ್ಷೇತ್ರದ ಜನತೆ ಪರವಾಗಿ ಅಭಿನಂದನೆ ಸಲ್ಲುಸುವದಾಗಿ ಹೇಳಿದರು. ( )
ನಂತರ ಕತ್ತಿ ಯವರ ಪರ ಘೋಷಣೆ ಕೂಗಿ ಹರ್ಷ ವ್ಯಕ್ತ ಪಡಿಸಿದರು.

ಹುಕ್ಕೇರಿ ಹಿರೆಮಠದ ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ ಉತ್ತರ ಕರ್ನಾಟಕ ವನ್ನು ಅಭಿವೃದ್ಧಿ ಪಡಿಸುವ ಕನಸು ಕಾಣುವ ಕನಸುಗಾರ ಉಮೇಶ ಕತ್ತಿಯವರಿಗೆ ಸಚೀವ ಸ್ಥಾನ ನೀಡಿದ ಹಿನ್ನಲೆಯಲ್ಲಿ ನಮಗೆ ಅತಿವ ಸಂತೋಷವಾಗಿದೆ , ಕತ್ತಿಯವರ ಕನಸುಗಳು ನನಸಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾದ ಗೀರಿಶ ಪಾಟೀಲ, ಪ್ರಜ್ವಲ ನೀಲಜಗಿ, ರಾಜು ಮುನ್ನೋಳಿ, ಪರಗೌಡಾ ಪಾಟೀಲ, ಮೀರಾಸಾಬ ಮುಲ್ತಾನಿ, ಈರಪ್ಪಾ ಬಳೋಬಾಳ, ಆನಂದ ಲಕ್ಕುಂಡಿ, ಗುಂಡು ಪಾಟೀಲ, ಸೆರಿದಂತೆ ನೂರಾರು ಜನ ಬಿ ಜೆ ಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

error: Content is protected !!