Uncategorized

ಹುಕ್ಕೇರಿ ನಗರದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಜಾಗೃತ ರ್ಯಾಲಿ

Share

ಹುಕ್ಕೇರಿ ನಗರದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನದ ರ್ಯಾಲಿ ಜರುಗಿತು.
ಪಟ್ಟಣದ ವಿವಿಧ ಮುಖ್ಯ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು ಶ್ರೀ ರಾಮನ ಭಜನೆ ಮಾಡುತ್ತಾ ವಿವಿಧ ಮುಖ್ಯ ರಸ್ತೆಯಲ್ಲಿ ರಾಮನ ವೇಷಧಾರಿ ಬಾಲಕನನ್ನು ರಥದ ಮೇಲೆ ಮೆರವಣಿಗೆ ಮಾಡಲಾಯಿತು.


ನಂತರ ಕೋರ್ಟ ಸರ್ಕಲ್ ಬಳಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ರಾಮನ ನಾಮಸ್ಮರಣೆ ಮಾಡಿದರು.
ಇನ್ ನ್ಯೂಜ ಜೊತೆ ಮಾತನಾಡಿದ ಕುರಣಿ ಗ್ರಾಮದ ಗೀರಿಶ ಕಡೆದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಕಾರಣ ತಾಲೂಕಿನ ಪ್ರತಿ ಗ್ರಾಮಗಳಿಗೆ ತೇರಳಿ ನಿಧಿ ಸಮರ್ಪಣಾ ಅಭಿಯಾನದ ಕರ ಪತ್ರ ಹಂಚುವ ಮತ್ತು ವಿವಿಧ ರ್ಯಾಲಿ ಮುಖಾಂತರ ಜಾಗೃತ ಮೂಡಿಸಲಾಗುತ್ತಿದೆ ಎಂದರು ( )
ಈ ಸಂದರ್ಭದಲ್ಲಿ ನ್ಯಾಯವಾದಿ ತಮ್ಮಣ್ಣಾ ಸೋಡ್ಡನವರ, ಸಂಜೀವ ಮುತಾಲಿಕ ಹಾಗೂ ಕುರಣಿ ಸ್ವಾಮಿ ವಿವೇಕಾನಂದ ಶಾಲೆ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Tags:

error: Content is protected !!