Hukkeri

ಹುಕ್ಕೇರಿ: ಧರ್ಮಸ್ಥಳ ಸಂಸ್ಥೆಯಿಂದ ವಾತ್ಸಲ್ಯ ಕಿಟ್ ಮತ್ತು ವಿಕಲ ಚೇತನರಿಗೆ ಸಾಮಗ್ರಿ ವಿತರಣೆ

Share

ಹುಕ್ಕೇರಿ ನಗರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ ವತಿಯಿಂದ ವಿಲಕ ಚೇತನರಿಗೆ ಮತ್ತು ಅರ್ಹ ಮಾಸಾಸನ ಪಡೆಯುತ್ತಿರುವ ನಿರ್ಗತಿಕರಿಗೆ ವಾತ್ಸಲ್ಯ ಕೀಟ್ ಮತ್ತು ಅಂಗವಿಕಲರಿಗೆ ಸಾಮಗ್ರಿ ಗಳನ್ನು ಉಚಿತವಾಗಿ ನೀಡುವ ಸಮಾರಂಭ ಜರುಗಿತು.

ಪಟ್ಟಣದ ಈಶ್ವರಲಿಂಗ ದೇವಸ್ಥಾನದ ಸಭಾ ಭವನದಲ್ಲಿ ಜರುಗಿದ ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶ ಕೆ ವೆಂಕಟೇಶ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಯೋಜನಾಧಿಕಾರಿ ಶ್ರೀಮತಿ ಬಿ ಅನಿತಾ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು.
ವೇದಿಕೆ ಮೇಲೆ ಹಿರಿಯ ಪತ್ರಕರ್ತ ಪ್ರಕಾಶ ದೇಶಪಾಂಡೆ, ಬಿ ಜೆ ಪಿ ಮುಖಂಡ ಪರಗೌಡಾ ಪಾಟೀಲ, ತಹಸಿಲ್ದಾರ ಅಶೋಕ ಗುರಾಣಿ, ಸುರೇಖಾ ಮತ್ತಿಕೋಪ್ಪ, ಮೆಲ್ವಿಚಾರಕ ಪಿ ದಿನೇಶ ಉಪಸ್ಥಿತರಿದ್ದರು.

ಅಂಗವಿಕಲರಿಗೆ ತ್ರೀಚಕ್ರ ಸೈಕಲ್, ವಿಕಲಚೇತನರಿಗೆ ವಾಟರ ಬೇಡ್ ಮತ್ತು ವೃದ್ದರಿಗೆ ವಾತ್ಸಲ್ಯ ಕೀಟ್ ನೀಡಿ ಮಾತನಾಡಿದ ನ್ಯಾಯಾಧೀಶ ಕೆ ವೆಂಕಟೇಶ ಕಳೆದ ಆರು ತಿಂಗಳಿನಿಂದ ಕರೊನಾ ಕಯಿಲೆಯಿಂದ ಜನ ಜಿವನ ಅಸ್ತವ್ಯಸ್ತ ವಾಗಿತ್ತು ಈಗ ಸ್ವಲ್ಪ ಸುಧಾರಣೆ ಕಂಡು ಬರುತ್ತಿದೆ ಇದನ್ನು ಮನಗೊಂಡು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಲವಾರು ಜನಪರ ಯೋಜನೆಯೊಂದಿಗೆ ಮಹಿಳೆಯರ, ಬಡವರ,ಅಂಗವಿಕಲರ ಮತ್ತು ವೃದ್ದರಿಗೆ ಬೇಕಾಗುವ ಅವಶ್ಯಕ ಸಾಮಗ್ರಿಗಳನ್ನು ನೀಡಿ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿದೆ ಎಂದರು ,


ತಾಲೂಕಿನ ಸುಮಾರು 62 ಫಲಾನುಭವಿಗಳಿಗೆ ಸಾಮಗ್ರಿಗಳನ್ನು ನೀಡಲಾಯಿತು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಚಿಕ್ಕೊಡಿ ಜಿಲ್ಲಾ ನಿರ್ದೆಶಕ ಕೃಷ್ಣಾ ಟಿ ಮಾತನಾಡಿ ಪೂಜ್ಯ ವಿರೇಂದ್ರ ಹೇಗಡೆ ಯವರ ಮಾರ್ಗದರ್ಶನದಲ್ಲಿ ಇಂದು ಹುಕ್ಕೇರಿ ತಾಲೂಕಿನ ನಿರ್ಗತಿಕರಿಗೆ ದಿನ ನಿತ್ಯ ಬೇಕಾಗುವ ಸಾಮಗ್ರಿಗಳನ್ನು ನೀಡಲಾಗಿದೆ ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಯೋಜನೆಗಳನ್ನು ರೂಪಿಸಿ ಸಹಾಯ ಸಹಕಾರ ಮಾಡಲಾಗುವದು ಎಂದರು ( )
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಪಿ ದಿನೇಶ, ರಮೇಶ ನಾಯಿಕ, ಶ್ರೀದೇವಿ ಕಾಳಿಸಿಂಗೆ, ಹನುಮಂತ ಹಾಗೂ ತಾಲೂಕಿನ ವಿವಿಧ ಫಲಾನುಭವಿಗಳು ಉಪಸ್ಥಿತರಿದ್ದರು.

Tags:

error: Content is protected !!