ಹುಕ್ಕೇರಿ ತಾಲೂಕಾ ಪಂಚಾಯತ ತ್ರೈಮಾಸಿಕ ಸಭೆ ಜರುಗಿತು.
ಶಾಸಕ ಉಮೇಶ ಕತ್ತಿ ಅದ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.
ಈತ್ತಿಚಿಗೆ ಗ್ರಾಮ ಪಂಚಾಯತಿಗಳ ಚುನಾವಣಾ ನೀತಿ ಸಂಹಿತೆ ದೃಷ್ಟಿಯಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದ್ದು , ಆಡಳಿತ ಅಧಿಕಾರಿಗಳು ಪಂಚಾಯತಿಗಳ ಅದ್ಯಕ್ಷ ಉಪಾದ್ಯಕ್ಷ ಚುನಾವಣೆ ಆಗುವರೆಗೂ ಕಾಯದೆ ಗ್ರಾಮದಲ್ಲಿ ರಸ್ತೆ,ಚಂರಂಡಿ, ಕುಡಿಯುವ ನೀರು ಮೋದಲಾದ ಮೂಲ ಭೂತ ಸೌಲಭ್ಯಗಳ ಕೊರತೆ ಯಾಗದಂತೆ ಕ್ರಮ ವಹಿಸಬೇಕು ಮತ್ತು ಕರ ವಸೂಲಾತಿ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಮತ್ತು ಯಮಕನಮರ್ಡಿ ಹುಕ್ಕೇರಿ ಮತ ಕ್ಷೇತ್ರ ಎನ್ನದೆ ಅಖಂಡ ತಾಲೂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಉಮೇಶ ಕತ್ತಿ ಹೇಳಿದರು.
ವೇದಿಕೆ ಮೇಲೆ ತಾಲೂಕಾ ಪಂಚಾಯತ ಅದ್ಯಕ್ಷ ದಸ್ತಗಿರ ಬಸ್ಸಾಪೂರಿ, ಉಪಾದ್ಯಕ್ಷೆ ಲಕ್ಷ್ಮಿ ಬಾಯಿ ಪಾಟೀಲ, ಜಿಲ್ಲಾ ಪಂಚಾಯತ ಸದಸ್ಯೆ ಅನಸೂಯಾ ಪಾಟೀಲ, ತಾಲೂಕಾ ಪಂಚಾಯತ ಸದಸ್ಯರಾದ ಕೆಂಪವ್ವಾ ಮಾಳಗೆ, ಅನಿತಾ ಪಾಟೀಲ, ಮಿನಾಕ್ಷಿ ಮಾನಗಾಂವಿ, ಇಂದುಮತಿ ಮಾಳಗಿ, ಲಕ್ಷ್ಮಿ ಪಂಚನ್ನವರ,ಬಾಳಪ್ಪಾ ಗಸ್ತಿ, ತಹಸಿಲ್ದಾರ ಅಶೋಕ ಗುರಾಣಿ, ತಾಲೂಕಾ ಪಂಚಾಯತ ಇ ಓ B K ಲಾಳಿ, ಅಕ್ಷರ ದಾಸೋಹ ನಿರ್ದೆಶಕ ಶ್ರೀಶೈಲ್ ಹಿರೆಮಠ ಉಪಸ್ಥಿತರಿದ್ದರು.
ನಂತರ ಭೂ ಮಾಪನ ಇಲಾಖೆ ಅಧಿಕಾರಿ ಕಾಂಬಳೆ ಯವರಿಗೆ ತಾಲೂಕಿನ ಗ್ರಾಮಗಳಲ್ಲಿಯ ಹಳ್ಳ, ಸ್ಮಶಾನ ಭೂಮಿ ಮತ್ತು ಸರ್ಕಾರಿ ಜಮೀನು ವತ್ತುವರಿಗಳನ್ನು ಸರ್ವೆ ಮಾಡಿ ಸ್ವಾಧಿನಪಡಿಸಿಕೋಳ್ಳ ಬೇಕು ಎಂದು ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.