ಹುಕ್ಕೇರಿ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ರಾಜ್ಯ ಸರಕಾರಿ ನೌಕರರ ಸಂಘದ ಅದ್ಯಕ್ಷ ಮಹಾಂತೇಶ ರವರ ಮಾರ್ಗದರ್ಶನದಲ್ಲಿ ಹಿರಿಯ ಶಿಕ್ಷಕರಾದ ಕೆ ಸಿ ಮುಚಖಂಡಿ, ಬಿ ಬಿ ಬಾಯನ್ನವರ, ಎನ್ ಬಿ ಗುಡಸಿ ಮೊದಲಾದವರ ನೇತೃತ್ವದಲ್ಲಿ ಅವಿರೋಧ ಆಯ್ಕೆ ಜರುಗಿತು.
2020 -21 ನೇ ಸಾಲಿನ ಅದ್ಯಕ್ಷರಾಗಿ ಬಿ ಬಿ ಅಂಗಡಿ, ಉಪಾಧ್ಯಕ್ಷರಾಗಿ ಬಿ ಎಸ್ ಚೌಗಲಾ ಮತ್ತು ವೈಶಾಲಿ ಸದಲಗಿ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಸಿಂಗಾಡಿ ಸಹ ಕಾರ್ಯದರ್ಶಿಯಾಗಿ ಎನ್ ಪ್ರವೀಣ ಹಾಗೂ ಲಲಿತಾ ನಾಶಿಪುಡಿ ,ಸಂಘಟನಾ ಕಾರ್ಯದರ್ಶಿ ಜಯಶ್ರೀ ದಳವಾಯಿ ಮತ್ತು ಖಜಾಂಚಿ ಯಾಗಿ ರಾಜು ತಳವಾರ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿ ಬಿ ಎಂ ಓಬನ್ನವರ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿವರಿಸಿದರು.ನೂತನ ಅದ್ಯಕ್ಷ ಬಿ ಬಿ ಅಂಗಡಿ ಮಾತನಾಡಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅದ್ಯಕ್ಷ ಮಹಾಂತೇಶ ನಾಯಿಕ ಹಾಗೂ ತಾಲೂಕಿನ ಸರಕಾರಿ ಶಾಲಾ ಶಿಕ್ಷಕರ ಸಹಕಾರದಿಂದ ನಾನು ಅದ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದೆನೆ ಮುಂಬರುವ ದಿನಗಳಲ್ಲಿ ಎಲ್ಲರ ಸಹಕಾರದಿಂದ ಶಿಕ್ಷಕರ ದ್ವನಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತೆನೆ ಎಂದರು,
ರಾಜ್ಯ ಸರಕಾರಿ ನೌಕರರ ಸಂಘದ ಅದ್ಯಕ್ಷ ಮಹಾಂತೇಶ ನಾಯಿಕ ಮಾತನಾಡಿ ರಾಜ್ಯದ ವಿವಿಧ ತಾಲೂಕು ಕೇಂದ್ರಗಳಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಸಹಕಾರದಿಂದ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡಲಾಗುತ್ತಿದೆ ಅದೆ ರೀತಿ ಇಂದು ಹುಕ್ಕೇರಿ ತಾಲೂಕಿನ ಸಂಘವನ್ನು ಸಹ ಅವಿರೋಧ ಆಯ್ಕೆ ಮಾಡಿ ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕ ಸೇವೆ ಸಲ್ಲಿಸಲು ತಿಳಿಸಿ ನೂತನ ಸದಸ್ಯರ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಾ ಶಿಕ್ಷಕ ಶಿಕ್ಷಕಿಯರು ಚುನಾವಣೆ ಸಿಬ್ಬಂದಿಗಳು ಉಪಸ್ಥಿತರಿದ್ದರು.