Hukkeri

ಹುಕ್ಕೇರಿ : ಕೆರೆಯ ನೀರನ್ನು ಕೆರೆಗೆ ಚಲ್ಲಿದ ಹುಕ್ಕೇರಿ ಶಾಸಕ ಉಮೇಶ ಕತ್ತಿ

Share

ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಗಾದೆಯನ್ನು ನಾವು ಕೇಳಿದ್ದೆವೆ ಆದರೆ ಇಲ್ಲೋಬ್ಬ ಶಾಸಕ ಕೆರೆಯ ನೀರನ್ನು ಕೆರೆಗೆ ಚಲ್ಲುವ ಮೂಲಕ ಗಾದೆಮಾತನ್ನು ಸತ್ಯ ಮಾಡಿದ್ದಾರೆ . ಅದು ಎಲ್ಲಿ ಅಂತಿರಾ ಬನ್ನಿ ನೋಡೊಣ….

ಹುಕ್ಕೇರಿ ತಾಲೂಕಿನ ಸಾರಾಪೂರ ಗ್ರಾಮದ ಕೆರೆಗೆ ಕೋಟಬಾಗಿ ಏತ ನೀರಾವರಿ ಮೂಲಕ ನೀರು ಸಂಗ್ರಹಿಸಿ ದನ ಕರುಗಳಿಗೆ ಕುಡಿಯಲು ನೀರು ಮತ್ತು ಬಟ್ಟೆ ತೋಳೆಯಲು ಜನರು ಉಪಯೋಗಿಸುತ್ತಿದ್ದಾರೆ, ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಕೆರೆಯಲ್ಲಿ ಗರಿಷ್ಟ ಮಟ್ಟದಲ್ಲಿ ನೀರು ಸಂಗ್ರಹವಾಗಿದ್ದರಿಂದ ಸಾರಾಪೂರ ಕೆರೆಗಯಿಂದ ಲೀಫ್ಟ ಮುಖಾಂತರ ಶಿರಹಟ್ಟಿ ಬಿ ಕೆ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಹುಕ್ಕೇರಿ ಶಾಸಕ ಉಮೇಶ ಕತ್ತಿ ಕೈ ಹಾಕುವ ಮೂಲಕ ಕೆರೆಯ ನೀರನ್ನು ಕೆರೆಗೆ ಹಾಕುವ ಮೂಲಕ ಈ ಭಾಗದ ಜನರ ಆಶಾ ಕಿರಣರಾಗಿದ್ದಾರೆ.

ಶಾಸಕ ಉಮೇಶ ಕತ್ತಿ ಸಣ್ಣ ನೀರಾವರಿ ಇಲಾಖೆ ಮೂಲಕ ಸುಮಾರು 3 ಕೋಟಿ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾರಾಪೂರ ಗ್ರಾಮದ ಕೆರೆಗೆ 60 HP ಮೋಟಾರ ಮೂಲಕ ಸುಮಾರು 5 ಕೀಲೊ ಮೀಟರ DI ಪೈಪ್ ಹಾಕಿ 10 ಇಂಚ ಡಯಾಮೀಟರ ವ್ಯಾಸ ಅಳವಡಿಸಿ 5 ಮಿಲಿಯನ್‌ ಕ್ಯೂಬಿಕ್ ನೀರು ಬಿ ಕೆ ಶಿರಹಟ್ಟಿ ಗ್ರಾಮದ ಕೆರೆಗೆ ನೀರು ಸಂಗ್ರಹವಾಗುವ ಕಾರ್ಯಕ್ಕೆ ಇಂದು ಚಾಲನೆ ನೀಡಿದರು.
ಪೂಜಾ ಕಾರ್ಯಕ್ರಮ ನೆರವೇರಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಕತ್ತಿ ಕೋಟಬಾಗಿ ಯಾತ ನೀರಾವರಿ ಮೂಲಕ ಸಾರಾಪೂರ ಕೆರೆಗೆ ನೀರು ಸಂಗ್ರವಾಗುತ್ತಿದೆ ಆದರೆ ಇಲ್ಲಿ ಹೆಚ್ಚಾದ ನೀರನ್ನು ಜಾಕ್ ವೆಲ್ ಮೂಲಕ ಪಕ್ಕದ ಶಿರಹಟ್ಟಿ ಗ್ರಾಮದ ಕೆರೆಯನ್ನು ತುಂಬಿಸುವ ಕಾಮಗಾರಿಯನ್ನು ಇಂದು ಚಾಲನೆ ಮಾಡಲಾಗಿದೆ ,ಇದರಿಂದಾಗಿ ಸಾರಾಪೂರ ಮತ್ತು ಶಿರಹಟ್ಟಿ ಗ್ರಾಮಗಳ ಕೊಳವೆ ಭಾವಿಗಳಿಗೆ ಅಂತರಜಲ ಹೇಚ್ಚಾಗುವದು ಮತ್ತು ದನ ,ಕುರಿಗಳಿಗೆ ಕುಡಿಯಲು ನೀರು ಲಭ್ಯವಾಗಲಿದೆ ಕಾರಣ ರೈತರು ಈ ಯೋಜನೆಗೆ ಸಹಕರಿಸ ಬೇಕು ಎಂದರು,

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಬಿ ಬಿ ಬಿರಾದಾರ, ಅಭಿಯಂತರ ಸಂಜಯ ಮಾಳಗೆ, ಬಡಳವಿ ಗ್ರಾಮ ಪಂಚಾಯತಿ ಸದಸ್ಯ ಸತ್ತೆಪ್ಪಾ ನಾಯಿಕ ಹಾಗೂ ಸಾರಾಪೂರ ನೂತನ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.
ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಬಿ ಬಿ ಪಾಟೀಲ ರಿಗೆ ಗುಣ ಮಟ್ಟದ ಪೈಪ್ ಅಳವಡಿಸಿ ಕೇವಲ 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೋಳಿಸಲು ಶಾಸಕರು ಸೂಚನೆ ನೀಡಿದ್ದಾರೆ, ಆದರೆ ಸಾರಪೂರ ಗ್ರಾಮಸ್ಥರು ನಮ್ಮ ಗ್ರಾಮದ ಕೆರೆಯಿಂದ ನೀರನ್ನು ಬೇರೆ ಗ್ರಾಮದ ಕೆರೆಗೆ ಒಯ್ಯುವದರಿಂದ ನೀರಿನ ಮಟ್ಟ ಕಡಿಮೇಯಾಗುವದು ಇದರಿಂದ ನಾವು ಬೇಸಿಗೆಕಾಲದಲ್ಲಿ ದನಕರುಗಳಿಗೆ ಕುಡಿಯುವ ನೀರಿನ ಅಭಾವ ಕಂಡು ಬರುತ್ತದೆ ಇದಕ್ಕೆ ನಮ್ಮ ಸಮ್ಮತಿ ಇಲ್ಲಾ ಎಂದು ಗ್ರಾಮಸ್ಥ ಶಂಕರ ಬಡಗಾಂವಿ ಮಾದ್ಯಮಗಳ ಮೂಲಕ ಆಕ್ಷೆಪಮಾಡಿದ್ದಾರೆ,
ಏನೆ ಆಗಲಿ ಶಾಸಕ ಉಮೇಶ ಕತ್ತಿ ಹೋಸ ಯೋಜನೆಗೆ ಕೈ ಹಾಕಿದ್ದಾರೆ ಗ್ರಾಮಸ್ಥರ ವಿರೋಧದ ನಡುವೆ ಯಶ ಕಂಡರೆ ಕೆರೆಯ ನೀರನ್ನು ಕೆರೆಗೆ ಚಲ್ಲಿದಂತಾಗುತ್ತಾಗುತ್ತದೆ.

Tags:

error: Content is protected !!