Belagavi

ಹಿಂಡಲಗಾ ಜೈಲಿನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿಯಾದ ಕುಟುಂಬದ ಸದಸ್ಯರು

Share

ಧಾರವಾಡ ಜಿ.ಪಂ.ಸದಸ್ಯ ಯೋಗೇಶ್‍ಗೌಡ ಕೊಲೆ ಕೇಸ್‍ನಲ್ಲಿ ಜೈಲು ಸೇರಿರುವ ವಿನಯ್ ಕುಲಕರ್ಣಿ ಭೇಟಿಗೆ ಕುಲಕರ್ಣಿ ಕುಟುಂಬಸ್ಥರು ಬೆಳಗಾವಿ ಹಿಂಡಲಗಾ ಜೈಲಿಗೆ ಆಗಮಿಸಿದ್ದರು. ವಿನಯ್ ಭೇಟಿಗೆ ಪತ್ನಿ ಹಾಗೂ ಸಹೋದರ ಜೈಲಿನೊಳಗೆ ತೆರಳಿದ್ದರು. ಉಳಿದವರು ಕಾರಿನಲ್ಲಿ ಕುಳಿತಿದ್ದರು.

ಧಾರವಾಡ ಜಿ.ಪಂ.ಸದಸ್ಯ ಯೋಗೇಶ್‍ಗೌಡ ಕೊಲೆ ಕೇಸ್‍ನಲ್ಲಿ ಜೈಲು ಸೇರಿರುವ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ದೊರಕಿಲ್ಲ. ವಿನಯ ನ್ಯಾಯಾಂಗ ಬಂಧನ ಅವಧಿಯನ್ನು ಜನವರಿ 22ರವರೆಗೂ ವಿಸ್ತರಿಸಲಾಗಿದೆ. ಹೀಗಾಗಿ ವಿನಯ್ ಕುಲಕರ್ಣಿ ಭೇಟಿಗೆ ಅವಕಾಶ ಕೋರಿ ಕುಲಕರ್ಣಿ ಕುಟುಂಬದವರು ಕೋರ್ಟ್‍ಗೆ ಮನವಿ ಮಾಡಿದ್ದರು. ಸೋಮವಾರ ಸಂಜೆ 4 ರಿಂದ 5 ಗಂಟೆಯವರೆಗೆ ಭೇಟಿಗೆ ಕೋರ್ಟ್ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಹಿಂಡಲಗಾ ಜೈಲಿಗೆ ಕುಲಕರ್ಣಿ ಕುಟುಂಬಸ್ಥರು ವಿನಯ್ ಕುಲಕರ್ಣಿ ಭೇಟಿಗೆ ಬಂದಿದ್ದರು. ಈ ಹಿಂದೆ ಡಿಸೆಂಬರ್ 10ರಂದು ವಿನಯ್ ಕುಲಕರ್ಣಿ ಭೇಟಿಯಾಗಿದ್ದ ಕುಟುಂಬಸ್ಥರು ಇಂದು ಎರಡನೇ ಬಾರಿ ವಿನಯ್ ಕುಲಕರ್ಣಿ ಭೇಟಿಗೆ ಆಗಮಿಸಿದ್ದರು. ಪತ್ನಿ ಹಾಗೂ ಸಹೋದರ ವಿನಯ್ ಭೇಟಿಗೆ ಜೈಲಿನೊಳಗೆ ತೆರಳಿದರು.
ಜೈಲಿನ ಹೊರಗೆ ಕಾರಿನಲ್ಲಿ ಇತರೆ ಕುಟುಂಬ ಸದಸ್ಯರು ಕುಳಿತಿದ್ದರು.

Tags:

error: Content is protected !!