Uncategorized

ಸ್ಮಶಾನಕ್ಕೆ ಹೊಸ ರೂಪ ಕೊಟ್ಟ ಯುವಕರು

Share

ಮಹಾನಗರ ಪಾಲಿಕೆ ಮಾಡಬೇಕಾದ ಕೆಲಸವನ್ನು, ಉಣಕಲ ಅಭಿವೃದ್ಧಿ ಸಂಘದ ಸದಸ್ಯರು, ತಮ್ಮ ಕೆಲಸ ಕಾರ್ಯಗಳ ನಡುವೆಯೂ, ಇಲ್ಲೊಂದು ಯುವಕರ ತಂಡ ಎಲ್ಲರ ಮೆಚ್ಚುಗೆಯ ಕಾರ್ಯ ಮಾಡುತ್ತಿದ್ದಾರೆ…

ಹೌದು ಹೀಗೆ ಗಿಡ ಕಂಟಿಗಳನ್ನು ಜೆಸಿಬಿ ನಿಂದ ತಗಿಸುತ್ತಾ, ಕೈಯಲ್ಲಿ ಪೊರಕೆ ಹಿಡಿದು, ಎಲ್ಲ ಕಸವನ್ನು ಒಂದು ಕಡೆಗೆ ಹಾಕಿ ಸುಟ್ಟು ಹಾಕುತ್ತಾ, ಸ್ವಚ್ಚತಾ ಕಾರ್ಯ ಮಾಡುತ್ತಿರುವ ಇವರು, ಉಣಕಲ್ ಅಭಿವೃದ್ಧಿ ಸಂಘದ ಸದಸ್ಯರು.
ಹುಬ್ಬಳ್ಳಿಯಲ್ಲಿ ಪ್ರಸಿದ್ಧ ಹೊಂದಿದ, ಉಣಕಲ‌್ಲಿನ ಶ್ರೀ ಸಿದ್ದಪ್ಪಜ್ಜನವರ ೧೬೧ನೇಯ ಹುಟ್ಟು ಹಬ್ಬ ಮತ್ತು ತೊಟ್ಟಿಲೋತ್ಸವ ಅಂಗವಾಗಿ
ಉಣಕಲ ಅಭಿವೃದ್ಧಿ ಸಂಘದ ವತಿಯಿಂದ ಸಂಘದ ಕಾರ್ಯಕರ್ತರು ಹಾಗೂ ವಿವಿದ ಸಾಮಾಜಿಕ ಕಾರ್ಯಕರ್ತರು ಸೇರಿಕೊಂಡು ಒಂದು ರುದ್ರಭೂಮಿಯನ್ನು ತಮ್ಮ ಸ್ವಂತ ಹಣದಲ್ಲಿ ಸ್ವಚ್ಛಮಾಡುತ್ತಿರುವುದು ಶ್ಲಾಘನೀಯವಾಗಿದೆ….

ನಗರದ ವಿದ್ಯಾನಗರದ ರುದ್ರಭೂಮಿ ಸ್ವಚ್ಚತೆಯಿಂದ ದೂರವಾಗಿತ್ತು, ಅದನ್ನು ಕಂಡ ಈ ಯುವಕರು, ರುದ್ರಭೂಮಿಯನ್ನು ಸ್ವಚ್ಛ ಮಾಡಿ ಹೊಸರೂಪ ಕೊಟ್ಟಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಡಬೇಕಾದ ಕೆಲಸವನ್ನು ಈ ಸಂಘದ ಸದಸ್ಯರು ಮಾಡಿದ್ದು, ಎಲ್ಲ ಸಾರ್ವಜನಿಕರಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ರುದ್ರಭೂಮಿಯು ಅಭಿವೃದ್ಧಿಯನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಈ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದ ಈ ಯುವಕರು, ಅಂತ್ಯಕ್ರಿಯೆ ಮಾಡಲು ಬರುವಾಗ ಸಾಕಷ್ಟು ಹೂಗಳನ್ನು ತೆಗೆದುಕೊಂಡು ಬರುತ್ತಾರೆ, ಆದಷ್ಟು ಪ್ಲಾಸ್ಟಿಕ್ ಗಳನ್ನು ಕಡಿಮೆಯಾಗಿ ಬಳಸಿ ರುದ್ರಭೂಮಿಯ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕಾರ್ಯಕರ್ತರು ಮನವಿ ಮಾಡಿಕೊಂಡರು.

ತಮ್ಮ ಸ್ವಂತ ಪರಿಶ್ರಮದಿಂದ ರುದ್ರಭೂಮಿಯನ್ನು ಸ್ವಚ್ಛ ಮಾಡುವ ಮೂಲಕ. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಹೀಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿರುವ ಈ ಸದಸ್ಯರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.

Tags:

error: Content is protected !!