ಹೋಗುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ನೋಡ ನೋಡುತ್ತಿದ್ದಂತೆಯೇ ಲಾರಿಯ ಮುಂದಿನ ಭಾಗ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ಹೋಲ್ತಿಕೋಟೆ ಕ್ರಾಸ್ ಬಳಿ ನಡೆದಿದೆ.
ಹಳಿಯಾಳದಿಂದ ದಾಂಡೇಲಿ ಪೇಪರ್ ಮೀಲ್‍ಗೆ ಕಟ್ಟಿಗೆ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಹೋಲ್ತಿಕೋಟೆ ಕ್ರಾಸ್ ಬಳಿ ಈ ಅವಘಡ ಸಂಭವಿಸಿದ್ದು ತಕ್ಷಣವೇ ಲಾರಿ ಚಾಲಕ ಲಾರಿಯನ್ನು ನಿಲ್ಲಿಸಿ ಬೆಂಕಿಯನ್ನು ಸಾರ್ವಜನಿಕರ ಸಹಾಯದಿಂದ ಆರಿಸಲು ಹರಸಾಹಸ ಪಡಲಾಯಿತು. ಲಾರಿಯ ಮುಂಭಾಗ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.