ರಾಜ್ಯ ಸರ್ಕಾರ 121 ಪೋಲಿಸ್ ಅಧಿಕಾರಿಗಳಿಗೆ 2019 ನೇ ಸಾಲಿನ ಚಿನ್ನದ ಪದಕ ಘೋಷಣೆ ಮಾಡಿದ್ದು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ಪ್ರಶಸ್ತಿಗಳನ್ನು ಈಗ ಕೊಡಲಾಗುತ್ತಿದ್ದು ಬೆಳಗಾವಿ ಜಿಲ್ಲೆಯ ಅಥಣಿಯ ಸಿಪಿಐ ಶಂಕರಗೌಡ ಬಸನಗೌಡರ ಅವರು ಮುಖ್ಯಮಂತ್ರಿ ಅವರ ಚಿನ್ನದ ಪದಕಕ್ಕೆ ಭಾಜನರಾದ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಸಮಾಜ ಸೇವಕರು ಹಾಗೂ ವಿವಿಧ ಗಣ್ಯರಿಂದ ಅಭಿನಂದನೆಯ ಮಹಾಪೂರವೇ ಹರಿದುಬಂತು.
ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ಶ್ರೀಶೈಲ ನಾಯಕ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಎಲ್ಲರ ರಕ್ಷಣೆಗೆ ಶ್ರಮಿಸಿದ ಪೋಲಿಸ್ ಇಲಾಖೆಯ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಿಗೆ ಮುಂಖ್ಯಮಂತ್ರಿಗಳ ಬಂಗಾರದ ಪದಕ ಒಲಿದದ್ದು ಸಂತಸ ತಂದಿದೆ. ಸಿಪಿಐ ಶಂಕರಗೌಡ ಅವರ ಅವಿರತ ಶ್ರಮ ಮತ್ತು ಜನಸಾಮಾನ್ಯರಿಗೆ ನ್ಯಾಯ ಒದಗಿಸಿದ ಅಧಿಕಾರಿಗಳ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಅವರಿಗೆ ಚಿನ್ನದ ಪದಕ ಬಂದಿದೆ ಮುಖ್ಯವಾಗಿ ಅವರು ಪದಗ್ರಹಣ ಆಗುತ್ತಿದ್ದಂತೆ ಪ್ರವಾಹ, ಮತ್ತು ಕೊರೋನಾಗಳಂತಹ ಕಷ್ಟಕರ ಸಂದರ್ಭದಲ್ಲಿ ನಿಷ್ಠರಾಗಿ ಜನಸೇವೆ ಮಾಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಅಂತವರಿಗೆ ಮುಖ್ಯಮಂತ್ರಿಗಳ ಬಂಗಾರದ ಪದಕ ದೊರಕಿದ್ದು ನಮಗೆ ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಪಿಐ ಶಂಕರಗೌಡ ಬಸನಗೌಡರ ಸಾಧನೆ ಅನ್ನುವದು ಸತತ ಪರಿಶ್ರಮದಿಂದ ಬರುವಂತದ್ದು ಹೊಸಟ್ಟಿ ಸೇರಿದಂತೆ ಅಥಣಿ ತಾಲೂಕಿನ ಯುವಕರು ನಮಗಿಂತ ಉನ್ನತ ಹುದ್ದೆಗೆ ಸೇರುವ ಮೂಲಕ ಜನಸೇವೆಗೆ ಮುಂದಾಗಬೇಕು.ಅಥಣಿ ಶಿವಯೋಗಿಗಳ ಪುಣ್ಯಕ್ಷೇತ್ರವಾಗಿದೆ ಇಲ್ಲಿನ ಜನ ನ್ಯಾಯವನ್ನು ಒಪ್ಪಿಕೊಳ್ಳುವ ಮತ್ತು ಗೌರವಿಸುವ ಗುಣ ಹೊಂದಿದ್ದಾರೆ ಇಂತಹ ಊರಿನಲ್ಲಿ ಪಿಎಸ್ ಐ ಆಗಿದ್ದ ನಾನು ಎರಡನೆಯ ಬಾರಿಗೆ ಪದೋನ್ನತಿ ಹೊಂದಿದ ಬಳಿಕ ಮರುಸೇವೆಗೆ ಅವಕಾಶ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದರು.
ಈ ವೇಳೆ ಗ್ರಾಮಸ್ಥರಾದ ಶಿವಾನಂದ ನಾಯಿಕ, ನೂತನ ಗ್ರಾಮ ಪಂಚಾಯತಿ ಸದಸ್ಯ ಸಂಜಯ ಹಣ್ಣಮಾಪೂರೆ, ಚಂದು ಪವಾರ್, ರಮೇಶ ಬರಲ್ಲಿ, ಗುತ್ತಿಗೆದಾರ ಅರ್ಜುನ ನಾಯಿಕ, ಹಣ್ಣಮಂತ ನಾಯಿಕ, ಮಂಜು ಕರಾವಳಿ. ರಾಮು ನಾಯಿಕ, ಮಹಾದೇವ ಹಲ್ಯಾಳ, ಶಿದ್ದಲಿಂಗ ನಾಯಿಕ, ಶಿವುಪುತ್ರ ನಾಯಿಕ, ಕುಮಾರ ಹಣ್ಣಮಾಪುರೆ, ಇನೂ ಹಲವರು ಉಪಸ್ಥಿತರಿದ್ದರು.