ಬೀಗ ಮುರಿದು ಹುಂಡಿ ಕಳ್ಳತನದ ಮಾಡಿರುವ ಘಟನೆ ಹುಬ್ಬಳ್ಳಿಯ ಕುಸುಗಲ್ ಗ್ರಾಮದಲ್ಲಿರುವ ಸಿದ್ಧಾರೂಢರ ಮಠದಲ್ಲಿ ನಡೆದಿದೆ..

ಇಂದು ಮುಂಜಾನೆಯ 4 ಗಂಟೆ ಸುಮಾರಿಗೆ ಕುಸೂಗಲ್ ಗ್ರಾಮದ ಸಿದ್ಧಾರೂಢರ ಮಠಕ್ಕೆ ನುಗ್ಗಿದ ಕಳ್ಳರು ದೇವಸ್ಥಾನದಲ್ಲಿನ ಬಾಗಿಲಿಗೆ ಹಾಕಿರುವ ಬೀಗ ಮುರಿದು ಒಳಗಡೆ ಇದ್ದ ಹುಂಡಿ ಎತ್ತಿಕೊಂಡು ಪರಾರಿಯಾಗಿದ್ದಾರೆ. ಇದರಲ್ಲಿ ಸಾವಿರಾರು ರೂ. ದೇಣಿಗೆ ಹಣ ಸಂಗ್ರಹವಾಗಿದ್ದು. ಇನ್ನೂ ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.