hubbali

ಸಿಎಂ ಅವರ ಸಿಡಿ ಇದ್ರೆ ಕೊಡಿ, ಸುಮ್ನೆ ಹೆದರಿಸುವುದು ಏಕೆ: ಪ್ರಹ್ಲಾದ್ ಜೋಶಿ

Share

ರಾಜಕಾರಣದಲ್ಲಿ ಆಸೆ ಇರುವದು ತಪ್ಪಲ್ಲ. ಆದ್ರೆ ಬಹಿರಂಗ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಶಾಸಕರ ಅಸಮಾಧಾನವನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಆದ್ರೆ ಸಿಡಿ ಇದೆ ಅಂತ ಹೆದರಿಸುವುದು ಸರಿಯಲ್ಲ. ಸಿಎಂ ಅವರೇ ಹೇಳಿದ್ದಾರೆ. ಸಿಡಿ ಇದ್ರೆ ಕೊಡಿ ಅಂತ. ಅವರ ಬಳಿ ಸಿಡಿ ಇಲ್ಲ ಏನೂ ಇಲ್ಲ ಸುಮ್ನೆ ಹೆದರಿಸುತ್ತಿದ್ದಾರೆ. ಇದ್ರೆ ಬಿಡುಗಡೆ ಮಾಡಲಿ, ಇದು ಕೇವಲ ಹೆದರಿಸುವ ತಂತ್ರ. ನನ್ನ ಬಳಿ ಸಿಡಿ ಬಂದಿಲ್ಲ. ಬಂದ್ರೆ ನಾನು ಮೊದಲೇ ನಿಮಗೆ ಕೊಡುತ್ತೇನೆ ಎಂದು ನಗೆಚಟಾಕಿ ಹಾರಿಸಿದರು.

ಒಟ್ಟಿನಲ್ಲಿ ಸಿಡಿ ಇದೆ ಅಂತ ಹೆದರಿಸುವುದು ಸರಿಯಲ್ಲ. ಸಿಎಂ ಅವರೇ ಹೇಳಿದ್ದಾರೆ. ಸಿಡಿ ಇದ್ರೆ ಕೊಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಿಡಿ ಬಾಂಬ್ ಸ್ಫೋಟಿಸಿದವರಿಗೆ ಬಹಿರಂಗ ಆಹ್ವಾನ ನೀಡಿದರು.

Tags:

error: Content is protected !!