ವಿಜಯಪುರ ಶಾಸಕ ಯತ್ನಾಳ ವಿರುದ್ಧ ಸಂಸದ ಜಿಗಜಿಣಗಿ ವಾಗ್ದಾಳಿ ನಡೆಸಿದ್ದು ಪಕ್ಷದಲ್ಲಿ ಅಸಮಾಧಾನವಿದ್ರೇ ಪಕ್ಷದ ವೇದಿಕೆಯಲ್ಲಿ ಕಾರಿಕೊಳ್ಳಬೇಕು, ಹೀಗೆ ರೋಡ್ ರೋಡ್ ನಲ್ಲಿ ತಿರುಗಾಡಿದ್ರೇ ತಲೆ ಕೆಟ್ಟಿದೆ ಅಂತಾರೆ ಎಂದರು.
ಯತ್ನಾಳ ಪರವಾಗಿ ಒಳ್ಳೆಯವರು ಇಲ್ಲ, ಶಾಸಕ ಯತ್ನಾಳರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಡಿ ಅಂತಾ ಸಿಎಂ ಬಿಎಸ್ವೈಗೆ ಹೇಳಿದ್ದೆ, ಆಗವಸಾಹೇಬ್ರೇ ಇಂತಹವರನ್ನು ಪಕ್ಷಕ್ಕೆ ತೋಗಬ್ಯಾಡ್ರೀ ಅಂದಿದೆ, ಆದ್ರೀಗ ಯತ್ನಾಳರೇ ಸಿಎಂಗೆ ಮುಳ್ಳುವಾಗಿದ್ದಾರೆ ಎಂದರು. ಸಿಎಂ ಬಿಎಸ್ವೈ ವಿರುದ್ಧ ಯತ್ನಾಳ ಮಾತನಾಡಿದ್ದು ತಪ್ಪು ಎಂದು ಹೇಳಿದರು. ಇನ್ನೂ ಶಾಸಕ ಯತ್ನಾಳ ಸಿಡಿ ವಿಚಾರವಾಗಿ ಪ್ರತಿಕ್ರಿಯಿಸಿ ನನಗೆ CD ನನಗೆ ಗೊತ್ತಿಲ್ಲ, ನನಗೆ CD ತೋರಿಸಿಲ್ಲ, ನೋಡಿಲ್ಲ, ಸಿಡಿ ಕುರಿತು ಯತ್ನಾಳರನ್ನೇ ಕೇಳಿ ಎಂದರು. ರಾಜ್ಯದಲ್ಲಿ 1%, 2% ನಷ್ಟಿರುವ ಸಮುದಾಯದವರೇ ಮುಖ್ಯಮಂತ್ರಿ ಆಗಿದ್ದಾರೆ, 23% ಇರುವ ದಲಿತ ಸಮಾಜದವರು ಮುಖ್ಯಮಂತ್ರಿ ಆಗದಿದ್ದರೆ ನಾವು ಸುಮ್ಮನೆ