Uncategorized

ಸಾವಿತ್ರಿಬಾಯಿ ಫುಲೆಗೆ ಭಾರತರತ್ನ ಕೊಡಿ: ದಲಿತ ಸಂಘಟನೆಗಳಿಂದ ಕೇಂದ್ರಕ್ಕೆ ಆಗ್ರಹ

Share

ಅಕ್ಷರದ ಅವ್ವ ಎಂದೇ ಹೆಸರಾದ ಮಹಾತ್ಮಾ ಸಾವಿತ್ರಿಬಾಯಿ ಫುಲೆ ಅವರ 190ನೇ ಜನ್ಮದಿನವನ್ನು ವಿವಿಧ ದಲಿತ ಸಂಘಟನೆಗಳ ವತಿಯಿಂದ ಇಂದು ಬೆಳಗಾವಿಯ ಡಾ.ಅಂಬೇಡ್ಕರ್ ಗಾರ್ಡನ್‍ನಲ್ಲಿ ಆಚರಿಸಲಾಯಿತು.


ಬೆಳಗಾವಿಯ ಡಾ.ಅಂಬೇಡ್ಕರ್ ಗಾರ್ಡನ್‍ನಲ್ಲಿ ಭಾನುವಾರ ವಿವಿಧ ದಲಿತ ಸಂಘಟನೆಗಳ ವತಿಯಿಂದ ಅಕ್ಷರದ ಅವ್ವ ಎಂದೇ ಹೆಸರಾದ ಮಹಾತ್ಮಾ ಸಾವಿತ್ರಿಬಾಯಿ ಫುಲೆ ಅವರ 190ನೇ ಜನ್ಮದಿನವನ್ನು ಆಚರಿಸಲಾಯಿತು. ಮಹಾತ್ಮಾ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ದಲಿತ ಸಂಘಟನೆಗಳ ಮುಖಂಡರು, ಗಣ್ಯರು ಜನ್ಮದಿನಾಚರಣೆಗೆ ಚಾಲನೆ ನೀಡಿದರು.

ಈ ವೇಳೆ ಪ್ರೊ. ಕೆ.ಡಿ.ಮಂತ್ರೇಶಿ ಮಾತನಾಡಿ, ಮಹಿಳೆಯರು, ಹಿಂದುಳಿದವರ ಬಾಳಿನಲ್ಲಿ ಶಿಕ್ಷಣದ ಬೆಳಕು ಮೂಡಿಸಿದ ಸಾವಿತ್ರಿ ಬಾಯಿ ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು. ಮಹಿಳೆಯರ ಶಿಕ್ಷಣಕ್ಕೆ ಈ ಮಹಾಮಾತೆಗೆ ಇದುವರೆಗೂ ಭಾರತ ರತ್ನದಂತಹ ಅತ್ಯುನ್ನತ ಗೌರವ ನೀಡಿಲ್ಲ. ಆದರೆ ಜನತೆಯ ಹೃದಯದಲ್ಲಿ ಅವರು ಪೂಜ್ಯ ಸ್ಥಾನ ಪಡೆದುಕೊಂಡಿದ್ದಾರೆ. ಜನತೆಯ ಪ್ರೀತಿಗೆ ಭಾರತರತ್ನವೂ ಸಾಟಿಯಲ್ಲ ಎಂದರು.

ಈ ವೇಳೆ ದಲಿತ ಮುಖಂಡ ಮಲ್ಲೇಶ ಚೌಗಲೆ ಮಾತನಾಡಿ, ಮಹಿಳೆಯರು, ಹಿಂದುಳಿದ ವರ್ಗದವರು ಶಿಕ್ಷಣವೇ ಇಲ್ಲದೇ ಪರಿತಪಿಸುವ ಹೊತ್ತಿನಲ್ಲಿ ಬೆಳಕಾಗಿ ಬಂದವರು ಸಾವಿತ್ರಿಬಾಯಿ ಫುಲೆ. ಅವರು ಹೊತ್ತಿಸಿದ ಶಿಕ್ಷಣದ ದೀಪ ಇಂದು ಅನೇಕ ಮಹಿಳೆಯರ ಬಾಳು ಬೆಳಗಿದೆ. ಮಹಿಳೆಯರು ಸಾವಿತ್ರಿಬಾಯಿಯವರ ಜನ್ಮದಿನಾಚರಣೆಯಲ್ಲಿ ಹೆಚ್ಚು ಭಾಗವಹಿಸುವಂತೆ ಆದರೆ ಅವರ ಮಾಡಿದ ಕಾರ್ಯಕ್ಕೆ ಗೌರವ ನೀಡಿದಂತಾಗುತ್ತದೆ. ಸಾವಿತ್ರಿಬಾಯಿ ಅವರಿಗೆ ಭಾರತರತ್ನ ದೊರೆಯಬೇಕು ಎಂದರು.

ದಲಿತ ಮುಖಂಡರಾದ ಸುಧೀರ ಚೌಗಲೆ, ಶಿವಪುತ್ರ ಮೇತ್ರಿ, ಸಂತೋಷ ಹಲಗೇಕರ, ಅರ್ಜುನ ದೇಮಟ್ಟಿ, ಚೇತನ ಹುಟಗಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

Tags:

error: Content is protected !!