ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆಯಿಂದ ತಾಯಿ ಸಾವಿತ್ರಿಬಾಯಿ ಪುಲೆ ಜಯಂತಿ ನಿಮಿತ್ತ ಗೋಕಾಕ ವಾಲ್ಮೀಕಿ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಪ್ರತಿಭಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
: ಗೋಕಾಕ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಯಿ ಸಾವಿತ್ರಿಬಾಯಿ ಪುಲೆ ಜಯಂತಿ ನಿಮಿತ್ತ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರತಿಭಾ ಪ್ರಶಸ್ತಿ ನೀಡಿ ಶಾಸಕ ಸತೀಶ ಜಾರಕಿಹೊಳಿ ಗೌರವಿಸಿದರು.
ಈ ವೇಳೆ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ನಮಗೊಸ್ಕರ ಯಾರು ಹೋರಾಟ ಮಾಡಿ, ಒಳ್ಳೆಯ ವಿಚಾರಗಳನ್ನು ನೀಡಿದ್ದಾರೋ ಅಂತವರನ್ನು ನಾವು ಪೂಜೆ ಮಾಡದೆ ಯಾರು ಹೊರಾಡ ಮಾಡಿಲ್ಲವೋ ಅಂತವರನ್ನು ಇವತ್ತು ನಾವುಗಳು ಪೂಜಿಸುತಿದ್ದೇವೆ.
ಸ್ವಾತಂತ್ರ್ಯ ಸಮಯದಲ್ಲಿ ಜನರನ್ನು ಸೇರಿಸುವ ಸಲುವಾಗಿ ಬಾಲಗಂಗಾಧರನಾಥ ತಿಲಕ್ ಅವರು ಗಣಪತಿ ಇರಿಸುವ ಸಂಪ್ರದಾಯ ಆರಂಭಿಸಿದರು. ನಾವು ಜನರನ್ನು ಸೇರಿಸಲು ಹೆಲಿಕಾಪ್ಟರ್ ಇರಿಸಿದ್ದೇವೆ ಎಂದು ಚಟಾಕಿ ಹಾರಿಸಿದರು. ಮಹಾನ ವ್ಯಕ್ತಿಗಳ ವಿಚಾರಧಾರೆಯನ್ನು ಜನರಿಗೆ ತಿಳಿಸಲು ಜಯಂತಿ ಆಚರಣೆ ಮಾಡುತ್ತಿದ್ದೇವೆ. ಮಹಾನ ವ್ಯಕ್ತಿಗಳು ಹೋರಾಟ ಮಾಡಿದ ಉದ್ದೇಶವೇ ಬೇರೆ ಆದರೆ ಇವತ್ತು ತೋರಿಸುವುದೆ ಬೇರೆಯಾಗಿದೆ ಎಂದು ವ್ಯಂಗವಾಡಿದರು.
ಮಹಾನ ವ್ಯಕ್ತಿಗಳ ಪರಿಚಯ, ಅವರ ಮಾಡಿದ ಹೋರಾಟ, ವಿಚಾರಗಳನ್ನು ಪರಿಚಯಿಸುವ ಕೆಲಸಗಳನ್ನು ಮಾನವ ಬಂಧುತ್ವ ವೇದಿಕೆ ಮಾಡುತ್ತಾ ಬಂದಿದೆ. ಮುಂದೇಯೂ ಮಾಡುತ್ತದೆ ಎಂದರು.
ಇನ್ನು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹೆಲಿಕಾಪ್ಟರ್‍ನಲ್ಲಿ ಹಾರಾಡುವ ಅವಕಾಶ ಮಾಡಿಕೊಟ್ಟು ಎಲ್ಲ ವಿಜೇತರಿಗೆ ತಲಾ 5 ಸಾವಿರ ರೂ, ನಗದು ಹಣ ನೀಡಿ ಗೌರವಿಸಲಾಯಿತು.ಈ ವೇಳೆ ವಿಜೇತ ವಿದ್ಯಾರ್ಥಿನಿ ಮಾತನಾಡಿ, ಇದೇ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಏರಿದ್ದೇನೆ. ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರಕಾಶಕ್ಕೆ ತಂದು, ಬಹುಮಾನ ನೀಡಿ ಪ್ರೋತ್ಸಾಹಿಸುವ ಶಾಸಕ ಸತೀಶ ಜಾರಕಿಹೊಳಿ ಅವರ ಕಾರ್ಯ ನನಗೆ ಮೆಚ್ಚುಗೆಯಾಗಿದೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಶಾಸಕಿ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಅವರು ಶಿಕ್ಷಕರನ್ನು ಸತ್ಕರಿಸಿದರು. ಪುತ್ರ ರಾಹುಲ ಜಾರಕಿಹೊಳಿ ಉಪಸ್ಥಿತರಿದ್ದರು.