ಸಾಲ ಬಾಧೆ ತಾಳದೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದ ಯುವ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ರೈತನನ್ನು 30 ವರ್ಷದ ಬಾಬು ಕಾಶಪ್ಪ ಕೆಂಗೇರಿ ಎಂದು ಗುರುತಿಸಲಾಗಿದೆ. ಮೃತ ಯುವಕ ತಂದೆ, ಸಹೋದರ,ಹೆಂಡತಿ, ಮೂರು ವರ್ಷದ ಗಂಡು ಮಗು ಹಾಗೂ ಒಂದು ತಿಂಗಳಿನ ಕಂದಮ್ಮ ಬಿಟ್ಟು ಅಗಲಿದ್ದಾರೆ.ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.