ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ನಡೆದಿದೆ.
ತೋಟದ ಮನೆಯಲ್ಲಿ ಗಿರಿಮಲ್ಲಪ್ಪ ಕುಂಬಾರ (36) ನೇಣು ಹಾಕಿಕೊಂಡು ಆತ್ಮಹತ್ಯೆ ಶರಣಾದ ಮೃತ ರೈತನಾಗಿದ್ದು ಖಾಸಗಿ ವ್ಯಕ್ತಿಗಳ ಬಳಿ ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದ,
ಸಾಲ ಮರು ಪಾವತಿ ಮಾಡಲಾಗದ ಕಾರಣ ನೇಣಿಗೆ ಶರಣಾಗಿದ್ದಾನೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.