ಎಪ್ರೀಲ್ ಮೇ ಒಳಗೆ ಇಡೀ ರಾಜ್ಯದಲ್ಲಿ ಸಹಕಾರ ಇಲಾಖೆಯಿಂದ ಐದು ಸಾವಿರ ಉದ್ಯೋಗ ಭರ್ತಿ ಮಾಡಿಕೊಳ್ಳುವ ಗುರಿ ಇಟ್ಟುಕೊಂಡಿದ್ದೇವೆ ಸಹಕಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ ಎಲ್ಲಾ ಇಲಾಖೆಗಳ ಜೊತೆ ಮಾತನಾಡಿದ್ದೇನೆ. ಶೇ.2ರ ಒಳಗೆ ಬರುವುದಕ್ಕೆ ಅವರೇ ಉದ್ಯೋಗ ಭರ್ತಿ ಮಾಡಿಕೊಳ್ಳಬಹುದು. ಆದ್ರೆ ಶೇ.2ಕ್ಕಿಂತ ಹೆಚ್ಚಿಗೆ ಆದ್ರೆ ಅದಕ್ಕೆ ನಾವು ಅನುಮತಿ ನೀಡಬೇಕಾಗುತ್ತದೆ. ಹೀಗಾಗಿ ಎಪ್ರೀಲ್ ಮತ್ತು ಮೇ ಒಳಗೆ ಐದು ಸಾವಿರ ಉದ್ಯೋಗಗಳನ್ನು ಸಹಕಾರ ಇಲಾಖೆಯಲ್ಲಿ ತುಂಬಿಕೊಳ್ಳುತ್ತೇವೆ ಎಂದು ಹೇಳಿದರು.
ಇನ್ನು ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಏನೆಲ್ಲಾ ಅನುಕೂಲ ಆಗುತ್ತದೆ. ಹಿಂದೆ ಏನೆಲ್ಲಾ ಅನುಕೂಲ ಆಗುತ್ತಿತ್ತು ಎಂಬುದರನ್ನು ರೈತರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.