ಸರ್ಕಾರಿ ಬಸ್ ಗೆ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ಸಿಂದಗಿ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿವಾಸಿ ಗೊಲ್ಲಾಳಪ್ಪ ವಿಟೋಭಾ ಕಡ್ಲೇವಾಡ(43) ಮೃತ ದುರ್ದೈವಿಯಾಗಿದ್ದು ಸಿಂದಗಿ ನಿಲ್ದಾಣದಲ್ಲಿ ಬಸ್ ನಿಲ್ಲಿಸುವಾಗ ಹಿಂಬದಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಬೈಕ್ ಸವಾರ ಕುಡಿದು ನಶೆಯಲ್ಲಿದ್ದ ಅನ್ನೋ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸಿಪಿಐ ಎಚ್.ಎಂ ಪಾಟೀಲ ಭೇಟಿ ಪರಿಶೀಲನೆ ನಡೆಸಿದ್ದು ದೂರು ದಾಖಲಾಗಿದೆ…
