ಸ್ವಾಮಿ ವಿವೇಕಾನಂದರ 157 ನೇ ಜಯಂತಿಯ ಅಂಗವಾಗಿ ಸಮರ್ಥ ಭಾರತ ವಾಕಥಾನ್ 2021 ನಡೆಯಿತು. ಸಮರ್ಥ ಭಾರತ ಸಂಸ್ಥೆಯ ಅಡಿಯಲ್ಲಿ ವಿಜಯಪುರ ನಗರದಲ್ಲಿ ವಾಕಥಾನ್ ನಡೆಯಿತು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ಬೆಳಗಾವಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟೆ, ನಗರ ಮಂಡಲ ಅಧ್ಯಕ್ಷ ಮಾಳುಗೌಡ ಪಾಟೀಲ, ಬಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಜಿಲ್ಲಾ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಕೃಷ್ಣ ಗುನ್ಹಾಳಕರ, ಜಗದೀಶ ಮುಚ್ಚಂಡಿ, ವಿಜಯ ಜೋಶಿ ಮತ್ತಿತರರು ಪದಾಧಿಕಾರಿಗಳು ಭಾಗಿಯಾಗಿದ್ದರು.
150 ಕ್ಕೂ ಹೆಚ್ಚು ಯುವಕರು ಪಾಲ್ಗೊಂಡಿದ್ದರು. ವಿಜಯಪುರ ನಗರದ ಶಿವಾಜಿ ವೃತ್ತದಿಂದ ಶ್ರೀ ಸಿದ್ದೇಶ್ವರ ದೇವಸ್ಥಾನವರೆಗೆ ವಾಕಥಾನ್ ನಡೆಯಿತು. ವಾಕಥಾನ್ ಉದ್ದಕ್ಕೂ ಭಾರತ ಮಾತಾ ಕೀ ಜೈ ಉದ್ಘೋಷ ಮೊಳಗಿದವು…