Uncategorized

ಸತತ 25 ವರ್ಷಗಳ ಕಾಲ ಕರೋಶಿ ಗ್ರಾಮ ಪಂಚಾಯತ ಮೇಲೆ ಹಿಡಿತ ಸಾಧಿಸಿದ ಮಹೇಶ ಭಾತೆ..

Share

 

 

ಜನರ ಸಮಸ್ಯೆಗಳನ್ನು ಆಲಿಸುತ್ತಾ, ಕರೋಶಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕರೋಶಿ ಗ್ರಾಮವನ್ನು ಮತ್ತೆ ತನ್ನ ಹಿಡಿತದಲ್ಲಿಟ್ಟುಕೊಂಡು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಹೇಶ ಭಾತೆಯವರು ದಾಖಲೆಯನ್ನು ನಿರ್ಮಿಸಿದ್ದಾರೆ.

ಹೌದು ಇತ್ತೀಚಿಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶದಲ್ಲಿ ಕರೋಶಿ ಗ್ರಾಮದ ಮಹೇಶ ಭಾತೆಯವರ ನೇತೃತ್ವದ ಅಭಿವೃದ್ಧಿ ಪ್ಯಾನೆಲ್ ಭರ್ಜರಿ ಜಯಸಿಕ್ಕಿದೆ. 22 ಸ್ಥಾನಗಳ ಪೈಕಿ 16 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮತ್ತೆ ಮಹೇಶ ಭಾತೆಯವರು ಕರೋಶಿ ಗ್ರಾಮದ ಮೇಲೆ ಹಿಡಿತವನ್ನು ಸಾಧಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಜಾತಿ-ಮತ-ಪಂತ ಯಾವುದೇ ಭೇದಭಾವ ಮಾಡದೇ ಮಾಡಿದ ಅಭಿವೃದ್ಧಿ ಕಾರ್ಯಗಳು ಈ ಗೆಲುವಿಗೆ ಶ್ರೀರಕ್ಷೆಯಾಗಿದೆ. ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಹೇಶ ಭಾತೆಯವರು ಮಾಧ್ಯಮಗಳ ಜೊತೆ ಮಾತನಾಡಿ ಕರೋಶಿ ಗ್ರಾಮದಲ್ಲಿ ರಸ್ತೆ ,ಕುಡಿಯುವ ನೀರು, ಒಳಚರಂಡಿ, ಸಮುದಾಯಭವನ, ಸಾರ್ವಜನಿಕ ಶೌಚಾಲಯ, ಗ್ರಂಥಾಲಯ ಸೇರಿದಂತೆ ಹಲವು ಜನಪರ ಕೆಲಸಗಳನ್ನು ಮಾಡುವ ಮೂಲಕ ಕರೋಶಿ ಗ್ರಾಮವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದೇವೆ. ಇದರ ಪ್ರತಿಫಲವೇ ನಮ್ಮ ಕರೋಶಿ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರವನ್ನು ಗಿಟ್ಟಿಸಿ ಕೊಂಡಿದ್ದೇವೆ. ಹಾಗೂ ಸ್ಥಳೀಯ ಶಾಸಕರಾದ ದುರ್ಯೋಧನ ಐಹೊಳೆ ಯವರು ಕರೋಶಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಕರೋಶಿ ಗ್ರಾಮಕ್ಕೆ ಸಾಕಷ್ಟು ಅನುದಾನವನ್ನು ನೀಡಿದ್ದಾರೆ.ಮುಂಬರುವ ದಿನಗಳಲ್ಲಿ 16 ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರೋಶಿ ಗ್ರಾಮದಲ್ಲಿ ಮೂಲ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಿ, ಜನ ಸೇವೆಗೆ ಸದಾ ನಾವು ಸಿದ್ಧರಾಗಿದ್ದೇವೆ ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮಹೇಶ ಭಾತೆ ತಿಳಿಸಿದರು.

ಈ ಸಂಧರ್ಭದಲ್ಲಿ ರಾಮಾ ಒಂಟಗೂಡೆ,ದತ್ತು ಬಿದರೆ,ಬಾಳು ಮುಗಳಿ,ಸುರೇಶ ಮಾಂಗೂರೆ,ಸಿದ್ರಾಮ ಮದಹಳ್ಳಿ,ಸತ್ಯಪ್ಪಾ ಸೋಲಬನ್ನವರ,ಅಣ್ಣಾಸಾಹೇಬ ನಾಯಿಕ,ಶ್ರಿಧರ ನಾಯಿಕ,ಆನಂದ ನಾಯಿಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು….

Tags:

error: Content is protected !!