ಇಂದಷ್ಟೇ ಸಚಿವ ಸ್ಥಾನ ಕಳೆದುಕೊಂಡು ಮಂಕಾಗಿದ್ದ ಎಚ್.ನಾಗೇಶ್‍ರನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಹೌದು ಅಬಕಾರಿ ಸಚಿವರಾಗಿದ್ದ ಎಚ್.ನಾಗೇಶ್ ನನ್ನ ಸಂಪುಟದಿಂದ ಕೈ ಬಿಡುವುದಿಲ್ಲ ಎಂದು ಇಂದು ಬೆಳಿಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಆದ್ರೆ ಮಧ್ಯಾಹ್ನ ಅಷ್ಟೋತ್ತಿಗೆ ಎಚ್.ನಾಗೇಶ್ ರಾಜೀನಾಮೆ ನೀಡುವ ಕುರಿತು ಅಧಿಕೃತವಾಗಿ ಅವರೇ ಸ್ಪಷ್ಟಪಡಿಸಿದ್ದರು. ಹೀಗಾಗಿ ಸಚಿವ ಸ್ಥಾನ ತ್ಯಾಗ ಮಾಡಿದ ಕೆಲವೇ ಗಂಟೆಗಳಲ್ಲಿ ಎಚ್.ನಾಗೇಶ್‍ರನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಸಚಿವ ಸ್ಥಾನ ಸಿಕ್ಕರೂ ಕೂಡ ಎಚ್.ನಾಗೇಶ್‍ಗೆ ಸಂಪುಟ ದರ್ಜೆ ಸ್ಥಾನಮಾನವನ್ನು ಸಿಎಂ ಬಿಎಸ್‍ವೈ ನೀಡಿದ್ದಾರೆ.