Koppala

ಸಚಿವ ಸ್ಥಾನದಿಂದ ಕೈ ಬಿಡುವ ವಿಚಾರಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದೇನು..?

Share

ಸಧ್ಯ ಸಚಿವ ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆ, ಸಂಪುಟದಿಂದ ಕೋಕ್ ವಿಚಾರ ತೀವ್ರ ಚರ್ಚೆಯಾಗುತ್ತಿದೆ. ಈ ಸಂಬಂಧ ಮಾತನಾಡಿರುವ ಸಚಿವೆ ಶಶಿಕಲಾ ಜೊಲ್ಲೆ ನನಗಂತೂ ಕೇಂದ್ರ ಹಾಗೂ ರಾಜ್ಯ ನಾಯಕರಿಂದ ಈ ವರೆಗೂ ಸೂಚನೆ ಬಂದಿಲ್ಲ. ಸುಮ್ಮನೆ ಮಾಧ್ಯಮದಲ್ಲಷ್ಟೆ ನನ್ನ ಸಚಿವ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರ ಬಗ್ಗೆ ನಾನೇನು ಹೆಚ್ಚು ಚರ್ಚೆ ಮಾಡಲ್ಲ ಎಂದಿದ್ದಾರೆ.

ಕೊಪ್ಪಳದ ಕನಕಗಿರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ನಮ್ಮ ಯಾವುದೇ ನಾಯಕರು ಸಚಿವ ಸ್ಥಾನದ ಕುರಿತು ನನ್ನೊಂದಿಗೆ ಚರ್ಚೆ ಮಾಡಿಲ್ಲ. ಮಾಧ್ಯಮದಲ್ಲಿ ಎರಡು ಬಾರಿ ಚರ್ಚೆಗೆ ಬಂತು. ಎರಡೂ ಬಾರಿ ಉಳಿದುಕೊಂಡಿದ್ದೇನೆ. ಮೂರನೇ ಬಾರಿಯೂ ಈಗ ಮತ್ತೆ ಚರ್ಚೆಗೆ ಬರುತ್ತಿದೆ. ಕೊಟ್ಟ ಕೆಲಸವನ್ನಂತೂ ಚೆನ್ನಾಗಿ ನಿಭಾಯಿಸುತ್ತಿದ್ದೇನೆ. ಸುಮ್ಮನೆ ಚರ್ಚೆ ನಡೆಯುತ್ತಿವೆ. ಆ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಸಚಿವ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಬೆಂಗಳೂರು ಹೊರತುಪಡಿಸಿದರೆ ಬೆಳಗಾವಿ ಜಿಲ್ಲೆಯೇ ಅತಿ ದೊಡ್ಡ ಜಿಲ್ಲೆಯಾಗಿದೆ. ರಾಜಕಾರಣದಲ್ಲೂ ತನ್ನದೇ ಪಾತ್ರವನ್ನು ಹೊಂದಿದೆ. ಅಲ್ಲಿ ಸಚಿವರ ಸಂಖ್ಯೆಯು ಜಾಸ್ತಿಯಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ನನಗೆ ಕೊಟ್ಟಿರುವ ಸ್ಥಾನವನ್ನು ಚೆನ್ನಾಗಿ ನಿಭಾಯಿಸುತ್ತಿದ್ದೇನೆ. ಹೈಕಮಾಂಡ್ ಏನು ಆದೇಶ ಮಾಡುತ್ತದೆಯೋ ಅದರಂತೆ ಮುನ್ನಡೆಯುತ್ತೇನೆ. ನಾನು ಸಂಘಟನೆಯಿಂದ ಬೆಳೆದು ಬಂದವಳು. ಹೈಕಮಾಂಡ್ ಹೇಳಿದ್ದಕ್ಕೆ ಬದ್ಧ ಎಂದು ಹೇಳಿದ್ದಾರೆ.

Tags:

error: Content is protected !!