Politics

ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಶಾಸಕ ಮುನಿರತ್ನ ಇಲ್ವಾ ?

Share

ರಾಜ್ಯದ ಸಚಿವ ಸಂಪುಟ ನಾಳೆ ವಿಸ್ತರಣೆಯಾಗಲಿದೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿರುವ ನಡುವೆಯೇ ಶಾಸಕ ಮುನಿರತ್ನ ಅವರನ್ನು ಕ್ಯಾಬಿನೆಟ್ ಗೆ ಸೇರಿಸಿಕೊಳ್ಳುವುದಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ಮಂಗಳವಾರ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಎಡೆ ಮಾಡಿದೆ.

ರಾಜ್ಯ ಸಂಪುಟ ವಿಸ್ತರಣೆ ಸುಳಿವಿನ ಬೆನ್ನ ಹಿಂದೆಯೇ ಸಂಪುಟಕ್ಕೆ ಯಾರು ಸೇರುತ್ತಾರೆ, ಯಾರು ಬದಲಾಗುತ್ತಾರೆ ಎಂಬ ಚರ್ಚೆಗಳು ಭುಗಿಲ್ಲೆದ್ದಿವೆ. ಈ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ಆತಂಕದಿಂದ ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಮಂಗಳವಾರ ಭೇಟಿಯಾಗಿದ್ದಾರೆ. ಸಿಎಂ ಜೊತೆ ಚರ್ಚೆ ನಡೆಸಿ ವಾಪಸ್ ಆದ ವೇಳೆ ಮುನಿರತ್ನ ಟೆನ್ಶನ್‍ನಲ್ಲಿ ಇದ್ದರು ಎಂದು ಗೊತ್ತಾಗಿದ್ದು, ಮುನಿರತ್ನ ಭವಿಷ್ಯ ನಾಳೆಯೇ ಬಹಿರಂಗವಾಗಲಿದೆ.

Tags:

error: Content is protected !!