ರಾಜ್ಯ ಸಚಿವ ಸಂಪುಟದಿಂದ ಅಬಕಾರಿ ಸಚಿವ ಹೆಚ್. ನಾಗೇಶ್ ಕೋಕ್ ಪಡೆಯುವುದು ಬಹುತೇಕ ಖಚಿತವಾಗಿದೆ.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಸಚಿವ ನಾಗೇಶ್ ಮಂಗಳವಾರ ಬೆಳಗ್ಗೆ ಭೇಟಿ ಮಾಡಿದರು. ಮೂಲಗಳ ಪ್ರಕಾರ ನಾಗೇಶ್ ಸಂಪುಟದಿಂದ ನಿರ್ಗಮಿಸುವುದು ಬಹುತೇಕ ಖಚಿತವಾಗಿದೆ. ಯಾವುದೇ ಕ್ಷಣದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಆದರೆ ಮುಖ್ಯಮಂತ್ರಿ ನಿವಾಸದಿಂದ ಹೊರಬಂದ ಸಚಿವ ನಾಗೇಶ ಮಾಧ್ಯಮಗಳಿಗೆ ಏನೊಂದೂ ಪ್ರತಿಕ್ರಿಯಿಸದೇ ಸಿಟ್ಟಿನಿಂದ ನಿರ್ಗಮಿಸಿದರು.