ಸಂಗೊಳ್ಳಿ ಉತ್ಸವದ ಅಂಗವಾಗಿ ವೀರ ಜ್ಯೋತಿ ಯಾತ್ರೆಗೆ ನಂದಗಡದ ಪೂಣ್ಯ ಭೂಮಿಯಿಂದ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಪೂಜೆ ಮಾಡಿ ಬೀಳ್ಕೊಟ್ಟರು.
: ಹೌದು ಪ್ರತಿ ವರ್ಷ ಜರುಗುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ಅಂಗವಾಗಿ ವೀರ ಜ್ಯೋತಿ ಯಾತ್ರೆಗೆ ನಂದಗಡದ ಪೂಣ್ಯ ಭೂಮಿಯಿಂದ ಚಾಲನೆ ನೀಡಲಾಗುತ್ತದೆ.ಅದರಂತೆ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಪೂಣ್ಯ ಭೂಮಿಯಲ್ಲಿ ಇರುವ ರಾಯಣ್ಣನ ಸಮಾಧಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.ಅದರಂತೆ ತಹಶೀಲ್ದಾರ ರೇμÁ್ಮ ತಾಳಿಕೋಟಿ ಅವರು ಕೂಡಾ ರಾಯಣ್ಣನ ಸಮಾಧಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.
ತದನಂತರ ಪೂಣ್ಯ ಭೂಮಿಯ ಹೊರಗಡೆ ಇರುವ ವೀರ ಜ್ಯೋತಿ ಯಾತ್ರೆಗೆ ಕೂಡಾ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.ಅಲ್ಲಿಂದ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಹೋಗಿ ರಾಯಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಈ ಜ್ಯೋತಿ ಯಾತ್ರೆಗೆ ಬಿಳ್ಕೊಟ್ಟರು ಈ ವೀರ ಜ್ಯೋತಿ ಯಾತ್ರೆಯು ಬೀಡಿ-ಕಿತ್ತೂರ ಮಾರ್ಗವಾಗಿ ನೇರವಾಗಿ ಸಂಗೊಳ್ಳಿಗೆ ತಲುಪಲಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ ರೇμÁ್ಮ ತಾಳಿಕೋಟಿ, ನಂದಗಡ ಪಿಎಸ್ಐ ಯು.ಎಸ್.ಅವಟಿ ಸೇರಿದಂತೆ ಇನ್ನಿತರ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದು ವೀರ ಜ್ಯೋತಿ ಯಾತ್ರೆಗೆ ಬೀಳ್ಕೊಟ್ಟರು.