Uncategorized

ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ಜ.15ರಿಂದ ಫೆ.27ವರೆಗೂ ವಿಎಚ್‍ಪಿಯಿಂದ ನಿಧಿ ಸಮರ್ಪಣಾ ಅಭಿಯಾನ

Share

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ದೇಶವ್ಯಾಪಿಯಾಗಿ ವಿಶ್ವಹಿಂದೂ ಪರಿಷತ್ ವತಿಯಿಂದ ಜನವರಿ 15ರಿಂದ ಫೆಬ್ರುವರಿ 27ವರೆಗೂ ನಿಧಿ ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿಎಚ್‍ಪಿ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಅವರು ತಿಳಿಸಿದ್ದಾರೆ.

ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಶವ ಹೆಗಡೆ ಇಡೀ ದೇಶದ ನಾಲ್ಕೂವರೇ ಲಕ್ಷ ಗ್ರಾಮಗಳನ್ನು ಸಂಪರ್ಕಿಸಿ ಸುಮಾರು 11 ಕೋಟಿ ಮನೆಗಳಿಗೆ ಅಯೋಧ್ಯೆಯ ಹೋರಾಟದ ಇತಿಹಾಸದ ಕರಪತ್ರಗಳನ್ನು ಹಂಚಿಕೆ ಮಾಡಿ, ಜನರಿಂದ ಕಾಣಿಕೆ ಸಂಗ್ರಹಿಸಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್‍ಗೆ ಅದನ್ನು ವಿತರಿಸುವ ಗುರಿ ಇಟ್ಟುಕೊಂಡಿದ್ದೇವೆ. ಅದೇ ರೀತಿ ಬೆಳಗಾವಿ ಜಿಲ್ಲೆಯ 1400 ಗ್ರಾಮಗಳ 10 ಲಕ್ಷ ಮನೆಗಳನ್ನು ಸಂಪರ್ಕ ಮಾಡುವ ಸಂಕಲ್ಪವನ್ನು ಬೆಳಗಾವಿಯ ಕಾರ್ಯಕರ್ತರು ಇಟ್ಟುಕೊಂಡಿದ್ದಾರೆ ಎಂದು ಹೆಚ್ಚಿನ ಮಾಹಿತಿ ನೀಡಿದರು.

ವಿಎಚ್‍ಪಿ ಮುಖಂಡರಾದ ಮನೋಹರ ಮಠದ, ಜಯಂತ ಹುಂಬರವಾಡಿ, ಕೃಷ್ಣಾ ಭಟ್, ಶ್ರೀಕಾಂತ ಕದಂ, ಆರ್.ಕೆ.ಭಾಗಿ ಸೇರಿಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!