Agriculture

ಶೇಡಬಾಳದಲ್ಲಿ ಮಣ್ಣು ಆರೋಗ್ಯ ತಪಾಸಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ

Share

ಬೆಳಗಾವಿ ಜಿಲ್ಲಾ ಪಂಚಾಯತಿ ಮತ್ತು ಅಥಣಿ, ಕಾಗವಾಡ ತಾಲೂಕಾ ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕಾಗವಾಡ ಕಾರ್ಯಾಲಯದ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಶೇಡಬಾಳ ಸ್ಟೇಶನದ ಪ್ರಗತಿಪರ ರೈತ ಅಪ್ಪಾಸಾಹೇಬ ಪಾಟೀಲ ಇವರ ತೋಟದಲ್ಲಿ 2020-21ನೇ ವಿಶ್ವ ಮಣ್ಣು ಆರೋಗ್ಯ ಚಿಟಿ ಯೋಜನೆಯಡಿಯಲ್ಲಿ ರೈತರಿಗೆ ಪ್ರಾತ್ಯಕ್ಷಿಕ್ ಮತ್ತು ತರಬೇತಿ ಕಾರ್ಯಕ್ರಮ ಅಥಣಿ ತಾಲೂಕಾ ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ ಜಯಶ್ರೀ ಹಿರೇಮಠ ಇವರ ನೇತೃತ್ವದಲ್ಲಿ ಜರುಗಿತು.

ಶನಿವಾರ ರಂದು ಶೇಡಬಾಳ ಸ್ಟೇಶನ ಗ್ರಾಮದ ಅಪ್ಪಾಸಾಹೇಬ ಪಾಟೀಲ ಇವರ ತೋಟದಲ್ಲಿ ಜರುಗಿದ ಮಣ್ಣು ಆರೋಗ್ಯ ಪರೀಕ್ಷೆ ತರಬೇತಿ ಕಾರ್ಯಕ್ರಮದಲ್ಲಿ ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ತಳಿ ಅಭಿವೃದ್ಧಿ ಶಾಸ್ತ್ರಜ್ಞ ಬಿ.ಕೆ.ಆಠೋಣಿ ಇವರು ಮಣ್ಣಿನ ಆರೋಗ್ಯ ಕುರಿತು ತಾಂತ್ರಿಕ ಮಾಹಿತಿ ನೀಡಿದರು.

ಅಥಣಿ ತಾಲೂಕಾ ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ ಜಯಶ್ರೀ ಹಿರೇಮಠ ಮಾತನಾಡುವಾಗ, ರೈತನ ಆಸ್ತಿ ಅಂದರೆ ಫವತ್ತವಾದ ಭೂಮಿ. ಇದನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬ ರೈತನು ಕಳೇದ ಅನೇಕ ವರ್ಷಗಳಿಂದ ಹಳೆಯ ಪದ್ಧತಿ ಪ್ರಕಾರ ಬೇಸಾಯ ಮಾಡುತ್ತಾ ಬಂದಿದ್ದರು. ಕೆಲ ದಿನಗಳ ನಂತರ ಹೆಚ್ಚಿನ ಆದಾಯ ಪಡೆದುಕೊಳ್ಳಲು ಬೆಳೆಗಳಿಗೆ ಅವಶ್ಯಕತೆಕ್ಕಿಂತ ಹೆಚ್ಚಿನ ನೀರು, ರಾಸಾಯಣಿಕ ಗೊಬ್ಬರ ನೀಡುತ್ತಾ ಬಂದಿದ್ದರಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ರೈತರು ಎಚ್ಚರವಾಗಲೆಬೇಕು. ಸಾವಯವ ಕೃಷಿ ಪದ್ಧತಿ ಅಳವಡಿಸುತ್ತಾ ಹನಿನೀರಾವರಿ ಯೋಜನೆ ಬಳಿಸಲೆಬೇಕು. ನಿರಂತರವಾಗಿ ಕಬ್ಬಿನ ಬೆಳೆಗಳು ತೆಗೆದುಕೊಳ್ಳುತ್ತಿದ್ದರಿಂದ, ಅದರೊಂದಿಗೆ ನದಿ ತೀರದ ರೈತರು ಅನಾವಶ್ಯಕ ನೀರು ಬಳಿಸುತ್ತಿದ್ದಾರೆ. ಈ ಕಾರಣ ರೈತರು ಮಣ್ಣಿನ ಪರೀಕ್ಷಣೆ ಮಾಡಿಕೊಂಡು ಕಬ್ಬಿನ ಬೆಳೆ ಪರ್ಯಾಯವಾಗಿ ಬೇರೆ-ಬೇರೆ ಬೆಳೆಗಳು ಬೆಳೆಯಿರಿ. ಕೇಂದ್ರ ಹಾಗೂ ರಾಜ್ಯ ಸರಕಾರದ ಆದೇಶ ಮೇರಿಗೆ ಕೃಷಿ ಇಲಾಖೆ ನಿಮ್ಮ ಬೆನ್ನಿಗೆಯಿದೆಯೆಂದರು.

ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ತಳಿ ಅಭಿವೃದ್ಧಿ ಶಾಸ್ತ್ರಜ್ಞ ಬಿ.ಕೆ.ಆಠೋಣಿ ರೈತರಿಗೆ ಮಾರ್ಗದರ್ಶನ ನೀಡುವಾಗ, ಮನುಷ್ಯನು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿ ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತಾನೆ. ಅದೇ ರೀತಿ ಮಣ್ಣಿನ ಪರೀಕ್ಷಣೆ ಒಂದಾಗಿದೆ. ಪ್ರತಿಯೊಬ್ಬರು ಮಣ್ಣಿನ ಆರೋಗ್ಯದ ಚೀಟಿ ತಮ್ಮ ಬಳಿಯಿರಲೆಬೇಕೆಂದು ಹೇಳಿ, ಮಣ್ಣು ಮಾದರಿ ಯಾವಾಗ ಮತ್ತು ಎಷ್ಟೋ ತೆಗೆದುಕೊಳ್ಳಬೇಕು, ಮಾದರಿ ತೆಗೆಯುವ ಪದ್ಧತಿ, ತಶ್ಯ ಪೋಶಕಾಂಶಗಳ ಕೊರತೆಯ ಲಕ್ಷಣಗಳು, ಸಾರಜನಕದ ಕೊರತೆ ಲಕ್ಷಣಗಳು, ರಂಜಕ ಕೊರತೆಯ ಲಕ್ಷಣಗಳು, ಪೋಟ್ಯಾಶದ ಕೊರತೆ, ಕ್ಯಾಲಶಿಯಂ, ಮ್ಯಾಗನೇಶಿಯಂ, ಗಂಧಕ, ಕಬ್ಬಿನಾಂಶ ಕೊರತೆಗಳ ಬಗ್ಗೆ ರೈತರಿಗೆ ತಿಳುವಳಿಕೆ ನೀಡಿದರು.

ಕಾಗವಾಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಕಾಂತಿನಾಥ ಬಿರಾದಾರ ರೈತರಿಗೆ ಮಣ್ಣಿನ ಪರೀಕ್ಷೆಯ ಪ್ರಾತ್ಯೆಕ್ಷಿಕ ನೀಡಿದರು. ಈ ವೇಳೆ ಕೃಷಿ ಅಧಿಕಾರಿ ಮಹಾಂತೇಶ ನರಗಟ್ಟಿ, ನೋಡಲ ಅಧಿಕಾರಿ ಮಂಜುನಾಥ ತಲ್ಲುರ, ವಿ.ಕೆ.ಕಾಂಬಳೆ, ಪ್ರವೀಣ ದೇಸಾಯಿ, ಪ್ರಗತಿಪರ ರೈತರಾದ ಅಪ್ಪಾಸಾಹೇಬ ಪಾಟೀಲ, ಶೇಡಬಾಳ ಮಾಜಿ ಗ್ರಾಪಂ ಅಧ್ಯಕ್ಷರಾದ ನೇಮಿನಾಥ ನರಸಗೌಡರ, ಅಜೀತ ನರಸಗೌಡರ, ಬಾಬಾಸಾಹೇಬ ಸವದತ್ತಿ, ಲಿಂಗರಾಜ ಅನ್ನಿಗೇರಿ, ಸಂದೀಪ ಸಾಳುಂಕೆ, ಪ್ರಕಾಶ ಚೌಗಲಾ, ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

 

Tags:

error: Content is protected !!