Uncategorized

ಶಾಸಕ ಯತ್ನಾಳ ವಿರುದ್ದ ಭ್ರಷ್ಟಾಚಾರ, ಅತಿಕ್ರಮಣದ ಆರೋಪ;ಬಿಜೆಪಿ ಯಿಂದ ಉಚ್ಚಾಟಿಸುವಂತೆ ಒತ್ತಾಯ

Share

 

ವಿಜಯಪುರ ನಗರದ ಸರ್ವೆ ನಂಬರ್ 688 ಬ ಪ್ಲಾಟ್ ಸಂಖ್ಯೆ 99 ನ್ನು ಉದ್ಯಾನವನ ಕ್ಕಾಗಿ ಮೀಸಲಿಟ್ಟಿದ್ದು ಇದರಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡಾ ಪಾಟೀಲ ಯತ್ನಾಳ ತಮ್ಮ ಪ್ರಭಾವ ಬಳಸಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ಉದ್ಯಾನವನ ಜಾಗೆಯಲ್ಲಿ ಅನಧಿಕೃತವಾಗಿ ತಮ್ಮ ಅಧೀನದಲ್ಲಿರುವ ಸಿದ್ದೇಶ್ವರ ಸಂಸ್ಥೆ ಅಡಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಹೆಸರಿನಲ್ಲಿ ಸಿಬಿಎಸ್ ಸಿ ಪಠ್ಯವುಳ್ಳ ಶಾಲೆಯ ಕಟ್ಟಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮಾಹಿತಿ ಹಕ್ಕು ಹೊರಾಟಗಾರ ರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ಹಮೀದ ಎಸ್ ಇನಾಮದಾರ ಹಾಗೂ ಸನ್ನಿ ಗವಿಮಠ ಗಂಭೀರವಾಗಿ ಆರೋಪಿಸಿದರು. ವಿಜಯಪುರ ದಲ್ಲಿ ಮಾದ್ಯಮ ಗಳೊಂದಿಗೆ ಮಾತನಾಡಿ ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ಲಾಯರ್ಸ್ ಕಾಲೋನಿಯಲ್ಲಿರುವ ಉದ್ಯಾನ ವನ ಜಾಗೆಗೆ ಒಂದು ಎಕರೆ 14 ಗುಂಟೆ ಜಾಗೆಯನ್ನು ಮೀಸಲಾಗಿಸಿದೆ. ಒಂದು ಲೇಔಟ್ ನಿರ್ಮಿಸಿದ ಬಳಿಕ ಉದ್ಯಾನವನ ಜಾಗೆಯನ್ನು ಮಹಾನಗರ ಪಾಲಿಕೆ ಗೆ ಹಸ್ತಾಂತರಿಸುವದು ಕಡ್ಡಾಯವಾಗಿದೆ. ಉತಾರೆ ಯಲ್ಲಿಯೂ ಕೂಡ ಓಪನ್ ಪ್ಲೇಸ್ ಎಂದು ನಮೂದು ಇದೆ. ಓಪನ್ ಪ್ಲೇಸ್ ಎಂದು ನಮೂದು ಇರುವಾಗಲೂ ಕೂಡಾ ಶಾಸಕ ಯತ್ನಾಳರು ಉದ್ಯಾನವನ ಜಾಗೆಗೆ ಮೀಸಲಾದ ಜಾಗೆಯಲ್ಲಿ ಅನಧಿಕೃತವಾಗಿ ಶಾಲೆ ಕಟ್ಟುತ್ತಿದ್ದಾರೆ. ಶಾಲೆ ಕಟ್ಟಿದ್ದರೆ ಕಟ್ಟಲಿ ಆ ಶಾಲೆಯಲ್ಲಿ ಬಡವರ ಮಕ್ಕಳು ಕಲಿಯಲು ಆಗೋದಿಲ್ಲಾ, ಅಲ್ಲಿ ಈಗಾಗಲೇ ಸಮುದಾಯ ಭವನವಿದೆ. ಆದ್ರೆ ಸಮುದಾಯ ಭವನ ಎಲ್ಲರಿಗೂ ಉಪಯೋಗವಾಗುತ್ತೆ ಆದ್ರೆ ಶಾಸಕರು ಕಟ್ಟುತ್ತಿರುವ ಶಾಲೆ ಸಿರಿವಂತರ ಮಕ್ಕಳಿಗೆ ಉಪಯೋಗವಿಲ್ಲಾ, ಶಾಲೆ ಕಟ್ಟೋ ಮೂಲಕ ಉದ್ಯಾನವನ ಅತಿಕ್ರಮಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇನ್ನೂ ಶಾಸಕ ಯತ್ನಾಳ ರು ನಾನು ಶುದ್ದಹಸ್ತ, ಭ್ರಷ್ಟಾಚಾರ ಮಾಡಿಲ್ಲಾ ಎಂದು ಹೇಳುತ್ತ ತಿರುಗುತ್ತಾರೆ, ಆದ್ರೆ ಅವರೇ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದಾಖಲೆಗಳನ್ನು ಬಿಡುಗಡೆ ಗೊಳಿಸಿ ಆರೋಪಿಸಿದರು. ಈ ಕುರಿತು ಜಿಲ್ಲಾಡಳಿತಕ್ಕೆ ಉದ್ಯಾನವನ ಜಾಗೆಗಳಲ್ಲಿ ಅತಿಕ್ರಮಣ ತೆರವಿಗೆ ಮನವಿ ಮಾಡಿದ್ದೇವೆ ಈಗ ಮತ್ತೊಮ್ಮೆ ಮನವಿ ಪತ್ರ ಸಲ್ಲಿಸುವದಾಗಿ ತಿಳಿಸಿದರು. ಇನ್ನೂ ನಗರದ ಸರಕಾರಿ ಪ್ರೌಢಶಾಲೆಯ ಸುತ್ತಲೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದರು. ಅದರಲ್ಲಿ ಭ್ರಷ್ಟಾಚಾರ ನಡೆಸಿ ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆಸಿದ್ದರು. ಅದನ್ನು ಪ್ರಶ್ನಿಸಿ ಕೊರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಕ್ಕಾಗಿ ಹೊಟ್ಟೆಪಾಡಿಗಾಗಿ ನಡೆಸುತ್ತಿದ್ದ ವಾಟರ್ ಪ್ಯೂರಿಪೈಯರ್ ಮೇಲೆ ದಾಳಿ ನಡೆಸಿದರು ಎಂದು ಅಬ್ದುಲ್ ಹಮೀದ ಎಸದ ಇನಾಮದಾರ ಆರೋಪಿಸಿದರು. ಇನ್ನೂ ಯತ್ನಾಳ ಹಿಂದೂ ಧರ್ಮದ ಹೆಸರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಯವರ ಹಾಗೂ ಬಿಜೆಪಿ ಹೆಸರು ಕೆಡಿಸುತ್ತಿದ್ದು ಯತ್ನಾಳರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದರು…

Tags:

error: Content is protected !!