Hukkeri

ಶಬರಿ ಮಲೆಗೆ ಪ್ರವೇಶ ನಿಷೇಧ..ಕೇರಳ ಸರ್ಕಾರದ ವಿರುದ್ಧ ಪ್ರಮೋದ ಮುತಾಲಿಕ ವಾಗ್ದಾಳಿ..!

Share

ಅಯ್ಯಪ್ಪಾ ಸ್ವಾಮಿ ಮಾಲಾಧಾರಿಗಳಿಗೆ ಕೇರಳ ಸರ್ಕಾರ ಕೋವಿಡ್ ಹಿನ್ನಲೆಯಲ್ಲಿ ಪ್ರವೇಶ ನಿಷೇದಿಸಿದ ಹಿನ್ನೆಲೆಯಲ್ಲಿ ಶ್ರೀ ರಾಮ ಸೇನೆ ಸಂಘಟನೆ ತಿವ್ರವಾಗಿ ಖಂಡಿಸಿ ಇಂದು ರಾಷ್ಟ್ರಾದ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಹುಕ್ಕೇರಿ ಅಯ್ಯಪ್ಪಾಸ್ವಾಮಿ ಸೇವಾ ಸಂಸ್ಥೆಯ ಗುರುಸ್ವಾಮಿ ಪ್ರಕಾಶ ಪಾಟೀಲ ಮಿನಿ ವಿಧಾನಸೌದಕ್ಕೆ ತೆರಳಿ ತಹಸಿಲ್ದಾರ ಅಶೋಕ ಗುರಾಣಿ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಪ್ರಮೋದ ಮುತಾಲಿಕ ಮಾತನಾಡಿ ಪ್ರತಿ ವರ್ಷ ಅಯ್ಯಪ್ಪ ಸ್ವಾಮಿಗಳ ಲಕ್ಷಾಂತರ ಮಾಲಾಧಾರಿಗಳು ಕೇರಳ ರಾಜ್ಯದ ಶಬರಿ ಮಲೈಗೆ ತೇರಳಿ ಮಕರ ಜ್ಯೋತಿ ದರ್ಶನ ಮಾಡುತ್ತಾರೆ ಆದರೆ ಈ ವರ್ಷ ಕೋವಿಡ್ ನೆಪ ನೀಡಿ ಪ್ರವೇಶ ನಿಷೇಧಿಸಿದ್ದಾರೆ, ಕೇರಳ ಸರ್ಕಾರ ನಾಸ್ತಿಕವಾದಿಗಳಾಗಿದ್ದು ಇದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ, ದೇಶದಲ್ಲಿ ಮಾಲ್‍ಗಳು, ಪಬ್‍ಗಳು, ರಾಜಕೀಯ ಸಭೆಗಳು ಯಚೆತ್ತವಾಗಿ ನಡೆದಿವೆ ಆದರೆ ಮಾಲಾಧಾರಗಳಿಗೆ ಕೇರಳ ರಾಜ್ಯಕ್ಕೆ ಪ್ರವೇಶ ಏಕೆ ಇಲ್ಲಾ ಕೂಡಲೆ ಕೇಂದ್ರ ಸರ್ಕಾರ ಮದ್ಯ ಪ್ರವೇಶಿಸಿ ಕೇರಳ ರಾಜ್ಯಕ್ಕೆ ಸೂಚನೆ ನೀಡಬೇಕು ಇಲ್ಲವಾದರೆ ದೇಶ್ಯಾದ್ಯಂತ ಪ್ರತಿಭಟನೆ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು,

ಈ ಸಂದರ್ಭದಲ್ಲಿ ಅಯ್ಯಪ್ಪಾ ಸ್ವಾಮಿ ಸೇವಾ ಸಮಿತಿ ಮಾಲಾಧಾರಿಗಳಾದ ಪ್ರಕಾಶ ಪಾಟೀಲ, ಚಿದಾನಂದ ಬಸ್ತವಾಡ, ನೇಮಿನಾಥ ಖಾನಾಪೂರೆ, ಚೀದು ಬರಗಾಲಿ, ಗುರುಲಿಂಗ ಮುದಕನ್ನವರ, ಶೇಖರ ಮಾಲಾಜ, ಶ್ರೀರಾಮ ಸೇನೆ ಸಂಘಟನೆ ಮುಖಂಡರಾದ ಸುಭಾಸ ಕೇಸರಕರ, ಶಿವರಾಜ ನಾಯಿಕ, ವಿವೇಕ ಪುರಾಣಿಕ, ಸುಧಾಕರ ಶೇಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!