ಶನಿವಾರದಿಂದ ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆಯನ್ನು ನಿಡಲಾಗುತ್ತಿದೆ. ಆದರೆ ಗಳತಗಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇನ್ನೂವರೆಗೆ ಲಸಿಕೆ ಬಗ್ಗೆ ಡ್ರೈರನ್ ಯಾಕೆ ನಡೆಸುತ್ತಿಲ್ಲಾ ಅಂತ ಸಚಿವೆ ಶಶಿಕಲಾ ಜೊಲ್ಲೆಯವರು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಿಪ್ಪಾಣಿ ತಾಲೂಕಿನ ಗಳತಗಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಧಿಡೀರ್ ಭೇಟಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆಯವರು ಡ್ರೈರನ ಯಾಕೆ ಪ್ರಾರಂಭಿಸಿಲ್ಲ ಎಂದು ಗಳತಗಾದ ಮುಖ್ಯ ವೈಧ್ಯಾಧಿಕಾರಿ ಶ್ರೀದೇವಿ ಶೇಲ್ಯಾಗೋಳ ಹಾಗೂ ಸಿಬ್ಬಂದಿಗಳನ್ನು ಹಿಗ್ಗಾಮುಗಾ ತರಾಟೆಗೆ ತೆಗೆದುಕೊಂಡರು.
ಇನ್ನೂ ಆಸ್ಪತ್ರೆಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳ ಯಾವುದೇ ವ್ಯವಸ್ಥೆ ಮಾಡಿಲ್ಲಾ ಎಂದು ತಿಳಿದು ಮತ್ತಷ್ಟು ಗರಂ ಆದ ಜೊಲ್ಲೆ ಮೇಡಂ ಮೇಲಾಧಿಕಾರಿಗಳಿಗೆ ತಿಳಿಸಿ ಈ ವೈದ್ಯಾಧಿಕಾರಿಗಳ ಬಗ್ಗೆ ಸೂಕ್ತವಾದ ಕ್ರಮವನ್ನು ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.