Kittur

ವೀರಾಪುರ ಸ್ವತಂತ್ರ ಗ್ರಾಮ ಪಂಚಾಯಿತಿ: ಆಕ್ಷೇಪಣೆ, ಸಲಹೆ ಆಹ್ವಾನ..ಡಿ.ಸಿ.ಮಹಾಂತೇಶ ಹಿರೇಮಠ

Share

ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲ್ಲೂಕಿನ 38-ದಾಸ್ತಿಕೊಪ್ಪ ಗ್ರಾಮ ಪಂಚಾಯಿತಿಯಿಂದ ವೀರಾಪುರ ಹಾಗೂ ಅಮರಾಪುರ ಗ್ರಾಮಗಳನ್ನು ಪ್ರತ್ಯೇಕಿಸಿ ವೀರಾಪುರ ಸ್ವತಂತ್ರ ಗ್ರಾಮ ಪಂಚಾಯಿತಿಯಾಗಿ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ.

ಈ ಅಧಿಸೂಚನೆಯಿಂದ ಬಾಧಿತರಾಗಬಹುದಾದ ಯಾವುದೇ ವ್ಯಕ್ತಿಗಳು ತಮ್ಮ ಆಕ್ಷೇಪಣೆ ಮತ್ತು ಸಲಹೆಗಳನ್ನು ಜನವರಿ 4, 2021 ರೊಳಗೆ ಜಿಲ್ಲಾಧಿಕಾರಿಗಳು, ಬೆಳಗಾವಿ ಇವರಿಗೆ ಸಲ್ಲಿಸಬಹುದು. ನಿಗದಿತ ಅವಧಿ ಮೀರಿ ಬಂದ ಯಾವುದೇ ಆಕ್ಷೇಪಣೆ/ಸಲಹೆಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.

Tags:

error: Content is protected !!