hubbali

ವಿಶ್ವನಾಥ ನಮ್ಮ ಗುರುಗಳು ಅವರು ಏನು ಮಾತನಾಡಿದ್ರು ನಮಗೆ ಆಶೀರ್ವಾದ- ರಮೇಶ ಜಾರಕಿಹೊಳಿ

Share

ಎಚ್.ವಿಶ್ವನಾಥ ಅವರು ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಅವರು ನಮ್ಮ ಗುರುಗಳು. ಅವರ ಮಾತು ನಮಗೆ ಆಶೀರ್ವಾದ ಇದ್ದಂತೆ ಎಂದು ಸಚಿವ ರಮೇಶ ಜಾರಕಿಹೊಳಿ ತಮ್ಮ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ ಜಾರಕಿಹೊಳಿ ಎಚ್.ವಿಶ್ವನಾಥ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಏನು ಮಾತನಾಡಿದ್ರು ನಮಗೆ ಆಶಿರ್ವಾದವಿದಂತೆ. ಆದ್ರೆ ಅವರಿಗೆ ಮಂತ್ರಿ ಸ್ಥಾನ ನೀಡುವ ವಿಚಾರ ಕೋರ್ಟ್ ನಲ್ಲಿದೆ. ಕಾನೂನು ಅಡೆತಡೆ ಇದೆ ಎಂದರು.

ಇನ್ನು ಬಸವನಗೌಡ ಪಾಟೀಲ್ ಯತ್ನಾಳ ಅವರ ಬಗ್ಗೆಯೂ ಅಪಾರ ಗೌರವವಿದೆ. ಹಿರಿಯ ನಾಯಕರು ಅವರಿಗೆ ಸ್ಥಾನ ಮಾನಸಿಗಬೇಕು ಎಂಬುದು ನಮ್ಮ ಆಗ್ರಹ ಕೂಡ ಆಗಿದೆ. ಆದರೆ ಸಿಡಿ ಬಗ್ಗೆ ನನಗೆ ಮಾಹಿತಿ ಇಲ್ಲ. ಆದ್ರೆ ಮಾಧ್ಯಮಗಳ ಮುಂದೆ ಪಕ್ಷದ ಆಂತರಿಕ ವಿಚಾರ ಮಾತನಾಡಬಾರದು ಎಂದು ಅವರಲ್ಲಿ ಮನವಿ ಮಾಡುತ್ತೇನೆ ಎಂದರು.

ಸಿಪಿ ಯೋಗೀಶ್ ಅವರ ಮೇಲೆ ಗಂಭೀರ ಆರೋಪಗಳಿದ್ರೆ ವರಿಷ್ಟರ ಗಮನಕ್ಕೆ ತಂದರೆ ಅವರು ಕ್ರಮ ತಗೆದುಕೊಳ್ಳುತ್ತಾರೆ. ಇನ್ನು ವಿಜಯೇಂದ್ರ ಅವರು ಎಲ್ಲದರಲ್ಲಿಯೂ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಸುಳ್ಳು. ಸಿಎಂ ಮಗ ಅಂತ ಆರೋಪ ಮಾಡುತ್ತಾರೆ. ನಮ್ಮ ಇಲಾಖೆ ಅಲ್ಲ. ಬೇರೆ ಯಾವ ಇಲಾಖೆಗೂ ಅವರು ಕೈ ಹಾಕಿಲ್ಲ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.

ಒಟ್ಟಾರೆ ಪಕ್ಷದ ಆಂತರಿಕ ವಿಚಾರವನ್ನು ಮಾಧ್ಯಮಗಳ ಜೊತೆ ಮಾತನಾಡುವುದು ಸರಿಯಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

 

Tags:

error: Content is protected !!