ಬೆಳಗಾವಿ ನಗರದ ವಿವಿಧ ಕಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉತ್ತರ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದರು.
ಸೋಮವಾರ ಮಹಾನಗರ ಪಾಲಿಕೆ ಅನುದಾನದಡಿಯಲ್ಲಿ ನಗರದ ದೇವರಾಜ ಅರಸ ಕಾಲೋನಿಯ ಕೆ.ಎಚ್.ಬಿ ಕಾಲೋನಿಯಲ್ಲಿ ರಸ್ತೆ ಮರು ಡಾಂಬರೀಕರಣ ಹಾಗೂ ಅಶೋಕ ನಗರದಲ್ಲಿ ಯು.ಜಿ.ಡಿ ಪೈಪಲೈನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು. ಇದಾದ ಬಳಿಕ ಬಸವಣಕುಡಚಿಯ ದೇವರಾಜ ಅರಸ ಕಾಲೋನಿಯಲ್ಲಿ ಅಲ್ಪಸಂಖ್ಯಾತರ ಕಾಲೋನಿ ಅಭಿವೃಧ್ದಿ ಯೋಜನೆಯಡಿ ರೂ. 49.50 ಲಕ್ಷಗಳ ಅನುದಾನದಡಿಯಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೂ ಅನಿಲ್ ಬೆನಕೆ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅನಿಲ್ ಬೆನಕೆ ಪಾಲಿಕೆಯ 2 ಕೋಟಿ ಅನುದಾನದಲ್ಲಿ ನಗರದ ದೇವರಾಜ ಅರಸ್ ಕಾಲೋನಿಯ ಕೆ.ಎಚ್.ಬಿಯಲ್ಲಿ ರಸ್ತೆ ಮರು ಡಾಂಬರಿಕರಣ ಕಾಮಗಾರಿಯನ್ನು ಕೈಗೊಳ್ಳಲು ಹಾಗೂ ಅಶೋಕ ನಗರದ ಮಿಶ್ರಿಕೋಟೆ ಮನೆಯಿಂದ ಡಬಲ್ ರಸ್ತೆವರೆಗೆ ಯು.ಜಿ.ಡಿ ಪೈಪಲೈನ್ ಅಳವಡಿಕೆ ಕಾಮಗಾರಿಯನ್ನು ಮಹಾನಗರ ಪಾಲಿಕೆಯ 32.16 ಲಕ್ಷ ರೂಪಾಯಿ ಅನುದಾನದಲ್ಲಿ ಕೈಗೊಳ್ಳಲು ಭೂಮಿ ಪೂಜೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು. ಅದೇ ರೀತಿ ಬಸವಣಕುಡಚಿಯ ದೇವರಾಜ ಅರಸ ಕಾಲೊನಿಯಲ್ಲಿ ಅಲ್ಪಸಂಖ್ಯಾತರ ಕಾಲೋನಿ ಅಭಿವೃಧ್ದಿ ಯೋಜನೆಯಡಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳಾದ ಕಾರ್ಯನಿರ್ವಾಹಕ ಇಂಜಿನೀಯರ ಈಶ್ವರ, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರುಗಳಾದ ಸಚೀನ ಕಾಂಬಳೆ, ಮಹೇಶ ನರಸನ್ನವರ, ಗುತ್ತಿಗೆದಾರರಾದ ಎನ್.ಕೆ.ದಾಮಣೇಕರ, ಭರತೇಶ ಬುಡವಿ ಹಾಗೂ ಸ್ಥಳೀಯರು ಮತ್ತು ಕೆ.ಆರ್.ಆಯ್.ಡಿ.ಎಲ್‍ನ ಕಿರಿಯ ಅಭಿಯಂತರ ರಾಘವೇಂದ್ರ, ಗುತ್ತಿಗೆದಾರ ಪಿರಾಗಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.