Chikkodi

ವಿದ್ಯಾರ್ಥಿಗಳ ಗಮನಕ್ಕೆ: ವಿದ್ಯಾರ್ಥಿ ರಿಯಾಯಿತಿ ಪಾಸುಗಳನ್ನು ವಿತರಿಸಲು ಪ್ರಾರಂಭ

Share

ಬೆಳಗಾವಿ: ಚಿಕ್ಕೋಡಿ ವಿಭಾಗ ವ್ಯಾಪ್ತಿಯಲ್ಲಿನ 2020-21 ನೇ ಸಾಲಿನ ವಿದ್ಯಾರ್ಥಿ ರಿಯಾಯಿತಿ ದರದ ಬಸ್ ಪಾಸುಗಳ ವಿತರಣೆಯನ್ನು ಪಾಸ್ ಕೌಂಟರ್‍ಗಳಲ್ಲಿ ನೀಡಲಾಗುವುದು ಎಂದು ಚಿಕ್ಕೋಡಿ ವಿಭಾಗ ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಕ್ಕೋಡಿ, ಸದಲಗಾ, ನಿಪ್ಪಾಣಿ, ಬೋರಗಾಂವ, ಸಂಕೇಶ್ವರ, ಹುಕ್ಕೇರಿ, ಹತ್ತರಗಿ, ಗೋಕಾಕ, ಮೂಡಲಗಿ, ಯಾದವಾಡ, ಅಂಕಲಗಿ, ಕುಲಗೂಡ, ರಾಯಬಾಗ, ಅಥಣಿ, ಕಾಗವಾಡ ಹಾಗೂ ತೆಲಸಂಗ ಬಸ್ ಪಾಸ್ ವಿತರಣಾ ಕೇಂದ್ರಗಳ ಮೂಲಕ ನವ್ಹೆಂಬರ್ 17, 2020 ರಿಂದ ಪ್ರಾಥಮಿಕ, ಪ್ರೌಢಶಾಲೆ ಬಾಲಕರು (ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ) ಪ್ರೌಢಶಾಲೆ ಬಾಲಕೀಯರು, ಪಿಯುಸಿ/ಪದವಿ/ಡಿಪ್ಲೋಮಾ, ಐಟಿಐ, ವೃತ್ತಿಪರ ಕೋರ್ಸ್‍ಗಳು ಹಾಗೂ ಸಂಜೆ ಕಾಲೇಜು/ಪಿ.ಎಚ್.ಡಿ ಕೋರ್ಸ್‍ಗಳ ಎಲ್ಲ ಬಗೆಯ ವಿದ್ಯಾರ್ಥಿಗಳಿಗೆ ಬಸ್ ಪಾಸುಗಳನ್ನು ವಿತರಿಸಲು ಪ್ರಾರಂಭಿಸಲಾಗಿದೆ.
ಪಾಸುಗಳನ್ನು ಕಳೆದ ಸಾಲಿನಂತೆ ಶಾಲಾ/ಕಾಲೇಜುಗಳ ಮುಖಾಂತರ ವಿತರಿಸಲಾಗುವುದು. ಪಾಸಿನ ಅರ್ಜಿಗಳು ಉಚಿತವಾಗಿ ಸಂಬಂಧಪಟ್ಟ ಬಸ್ ಪಾಸ್ ಕೌಂಟರ್‍ಗಳಲ್ಲಿ ಪಡೆಯಬಹುದು.
ಸರ್ಕಾರದ ಆದೇಶದಂತೆ ಸೇವಾ ಸಿಂಧುವಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಮಾತ್ರ ವಿದ್ಯಾರ್ಥಿ ರಿಯಾಯಿತಿ ದರದ ಬಸ್ ಪಾಸುಗಳನ್ನು ವಿತರಿಸಲಾಗುವುದು. ಅರ್ಜಿಗಳನ್ನು ವೆಬ್‍ಸೈಟ್ https://servasindhu.karnataka.gov.in/ ನಲ್ಲಿ ನಮೂದಿಸಲಾಗುವುದು.

ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಪಡೆಯಲು ದೂರವಾಣಿ ನೋಂದಾಯಿಸಿದ ಆಧಾರಕಾರ್ಡ ಕಡ್ಡಾಯವಾಗಿರುತ್ತದೆ. ತಪ್ಪಿದ್ದಲ್ಲಿ ಸೇವಾ ಸಿಂಧುವಿನಿಂದ ಒ.ಟಿ.ಪಿ ಬರುವುದಿಲ್ಲ ಒ.ಟಿ.ಪಿ ಬರದೇ ಇದ್ದಲ್ಲಿ ಪಾಸಿನ ಅರ್ಜಿಯನ್ನು ನಮೂದಿಸಲು ಸಾಧ್ಯವಾಗುವುದಿಲ್ಲ.  ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ತಮ್ಮ ವಿವರಗಳನ್ನು ಭರ್ತಿಗೊಳಿಸಿದ, ನಂತರ ಭರ್ತಿಗೊಳಿಸಿದ ಅರ್ಜಿಯನ್ನು ಮುದ್ರಣಗೊಳಿಸಿ, ತಾವು ಅಭ್ಯಸಿಸುತ್ತಿರುವ ಶಾಲೆ/ಕಾಲೇಜುಗಳಲ್ಲಿ ಸಲ್ಲಿಸುವುದು. ಶಾಲೆ/ಕಾಲೇಜುಗಳಿಂದ ಅರ್ಜಿಗಳನ್ನು ಪರಿಶೀಲಿಸಿ, ಮುದ್ರಿತ ಅರ್ಜಿಗಳ ಮೇಲೆ ಶಾಲಾ/ಕಾಲೇಜು ಮೂಖ್ಯಸ್ಥರಿಂದ ಮೇಲು ರುಜುಗೊಳಿಸಿ, ಅರ್ಜಿಗಳನ್ನು ಸಂಬಂಧಿಸಿದ ತಾಲೂಕು ವ್ಯಾಪ್ತಿಯ ಶಾಲಾ/ಕಾಲೇಜುಗಳ ಪ್ರಾಂಶಪಾಲರು ಆಯಾ ಶಾಲೆ/ಕಾಲೇಜುಗಳ ಅಧಿಕೃತ ಸಿಬ್ಬಂದಿಗಳ ಮುಖಾಂತರ ಬಸ್ ಪಾಸ್ ಕೋರಿ ಅರ್ಜಿಗಳನ್ನು ಸಲ್ಲಿಸಬಹುದು.

Tags:

error: Content is protected !!