ರಾಜ್ಯ ಸರಕಾರ ಶಾಲಾ ಶಿಕ್ಷಕರ ಕೋವಿಡ್ ತಪಾಸಣೆ ಮಾಡಲು ಪ್ರಥಮ ಆದ್ಯತೆ ನೀಡಿದೆ. ವಿದ್ಯಾರ್ಥಿಗಳ ಕೋವಿಡ್ ತಪಾಸಣೆ ಬಗ್ಗೆ ಸಧ್ಯಕ್ಕೆ ಯಾವುದೇ ನಿರ್ದೇಶನ ನೀಡಿಲ್ಲಾ ಎಂದು ಅಥಣಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಬಸಗೌಡಾ ಕಾಗೆ ತಿಳಿಸಿದರು.
ಸೋಮವಾರ ರಂದು ಕಾಗವಾಡ ತಾಲೂಕಾ ಪಂಚಾಯತಿ ಸದಸ್ಯರ ಮಾಸಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ತಾಲೂಕಾ ಪಂಚಾಯತಿ ಅಧ್ಯಕ್ಷೆ ವಿದ್ಯಾರ್ಥಿಗಳ ಕೋವಿಡ್ ತಪಾಸಣೆಗೆ ಸರಕಾರ ಇನ್ನೂ ನಿರ್ದೇಶನ ನೀಡಿಲ್ಲ..ಅಥಣಿ ಟಿಎಚ್ಓ ಡಾ.ಬಸಗೌಡಾ ಕಾಗೆ ಬಾಯಿ ನಂದ್ಯಾಳ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಎಗಣಗೌಡರ ಸಭೆಯ ನೇತೃತ್ವ ವಹಿಸಿದ್ದರು.
ಈ ವೇಳೆ ಮಾತನಾಡಿದ ಟಿಎಚ್ಓ ಡಾ.ಬಸಗೌಡಾ ಕಾಗೆ ಕೋವಿಡ್ ತಪಾಸಣೆ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಿದ್ದು, ತಪಾಸಣೆ ರಿಪೆÇೀರ್ಟ್ ಅವರ ಮೊಬೈಲಿಗೆ ನೇರವಾಗಿ ಕಳುಹಿಸಲಾಗುವುದು. ವಿದ್ಯಾರ್ಥಿಗಳ ಕೋವಿಡ್ ತಪಾಸಣೆ ಬಗ್ಗೆ ಯಾವುದೇ ನಿರ್ದೇಶನೆ ಇಲ್ಲಾ. ಜಿಲ್ಲೆಯಲ್ಲಿ ಕಳೇದ 4 ದಿನಗಳಿಂದ ಕೋವಿಡ್ ತಪಾಸಣೆ ಸ್ಥಗೀತಗೊಂಡಿದ್ದು, ಈ ಮೊದಲೇ ತಪಾಸಣೆ ಮಾಡಿದ ರಿಪೆÇೀರ್ಟ್ ಬರುವವರೆಗೆ ಸ್ಥಗೀತ ಇಡಲಾಗಿತ್ತು. ನಾಳೆಯಿಂದ ಎಲ್ಲ ಶಿಕ್ಷಕರ ತಪಾಸಣೆ ಮಾಡಲು ಪ್ರಾರಂಭವಾಗಲಿದೆ ಎಂದರು.
: ಈ ವೇಳೆ ತಾಪಂ ಅಧ್ಯಕ್ಷೆ ವಿದ್ಯಾರ್ಥಿಗಳ ಕೋವಿಡ್ ತಪಾಸಣೆಗೆ ಸರಕಾರ ಇನ್ನೂ ನಿರ್ದೇಶನ ನೀಡಿಲ್ಲ..ಅಥಣಿ ಟಿಎಚ್ಓ ಡಾ.ಬಸಗೌಡಾ ಕಾಗೆಬಾಯಿ ನಂದ್ಯಾಳೆ, ಉಪಾಧ್ಯಕ್ಷ ಶೋಭಾ ಬಂಡಗರ, ಸದಸ್ಯರಾದ ಸಂಭಾಜಿ ಪಾಟೀಲ, ಜ್ಯೋತಿ ದೇವಣೆ, ಶಶಿಕಾಂತ ಕಾಂಬಳೆ, ವಸಂತ ಖೋತ, ಡಾ. ಪುಷ್ಪಲತಾ ಸುನ್ನದಕಲ್ಲ, ತೋಟಗಾರಿಕೆ ಇಲಾಖೆ ಅಧಿಕಾರಿ ಚೇತನ ದೇವಮೊರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.