ವಿಜಯಪುರ ನಗರ ಶಾಸಕ ಯತ್ನಾಳ್ ಒಂಟಿ ಸಲಗ ಹೀಗೆಂದೂ ಹಾಡಿ ಹೊಗಳಿದವರು ಕೂಡಲ ಸಂಗಮ ಪಂಚಮಸಾಲಿ ಶ್ರೀಗಳು.
ವಿಜಯಪುರ ದಲ್ಲಿ ಮಾತನಾಡಿದ ಶ್ರೀಗಳು ಆನೆ ನಡೆದಿದ್ದೆ ದಾರಿ, ಯತ್ನಾಳ್ ಗೌಡ್ರು ನಡೆದಿದ್ದೆ ದಾರಿ, ಯತ್ನಾಳರು ಮಾತನಾಡಿದ್ದರೇ ಅವರ ಕ್ಷೇತ್ರಕ್ಕಾಗಿ ಅಷ್ಟೇ ಮಾತನಾಡಿಲ್ಲ, ಈ ಹಿಂದೆ ಅಪ್ಪರ್ ಕೃಷ್ಣಾ ಯೋಜನೆ ಬಗ್ಗೆಯು ಆಗೀನ ಪ್ರಧಾನಿ ವಾಜಪೇಯಿ ಯವರಿಗು ಮನವರಿಕೆ ಮಾಡಿಸಿದ್ದರು. ಯತ್ನಾಳ್ ಸ್ವಾರ್ಥಕ್ಕಾಗಿ ಎಂದು ಮಾತನಾಡಿಲ್ಲ, ಇಡೀ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಮಾತನಾಡಿದ್ದಾರೆ, ಅವರು ಮಾತನಾಡಿದ್ದು ಸರಿ ಇದೆ ಎಂದು ಸಮರ್ಥಿಸಿದರು.
ಇದನ್ನ ತಪ್ಪು ತಿಳಿದುಕೊಂಡು ಯಡಿಯೂರಪ್ಪ ನವರು ಗರಂ ಆಗಿದ್ದಾರಂತೆ, ಯತ್ನಾಳ್ ಹಾಗೂ ಯಡಿಯೂರಪ್ಪರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಕೇವಲ ಆಡಳಿತಾತ್ಮಕ ಭಿನ್ನಾಭಿಪ್ರಾಯ ಇವೆ ಅಷ್ಟೇ ಇಬ್ಬರ ನಡುವೆ ಯಾವುದೇ ವಯಕ್ತಿಕ ಭಿನ್ನಾಭಿಪ್ರಾಯ ಇಲ್ಲ ಅಂತಾ ಅಂದುಕೊಂಡಿದ್ದೇನೆ, ಇನ್ಮೂ ಯತ್ನಾಳ್ ಬುಲೆಟ್ ಪಾಯಿಂಟ್ ಹಾಕ್ತಾ ಹೋದಂತೆ ಸರ್ಕಾರ ಸ್ಪಂದಿಸುತ್ತಲೆ ಹೋಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಧ್ವನಿ ಎತ್ತಬೇಕಿದ್ದ ಶಾಸಕರು ಧ್ವನಿ ಎತ್ತಲಿಲ್ಲ.. ಆದ್ರೆ ಶಾಸಕ ಯತ್ನಾಳ್ ಧ್ವನಿ ಎತ್ತಿದ್ದಾರೆ, ಇದು ಈ ನೆಲದ ಅಸ್ಮಿತೆ ಎಂದರು…