COVID-19

ವಿಜಯಪುರ ಜಿಲ್ಲೆಯಲ್ಲಿ ಶಿಕ್ಷಕನಿಗೆ ಕೊರೊನಾ ಧೃಡ;ಮತ್ತೆ ಬಂದಾಯಿತೊಂದು ಶಾಲೆ

Share

ಜನೇವರಿ 1 ರಿಂದ ಶಾಲಾ ಕಾಲೇಜುಗಳ ಆರಂಭ ಹಿನ್ನಲೆಯಲ್ಲಿ ಓರ್ವ ಪ್ರೌಢ ಶಾಲಾ ಶಿಕ್ಷಕನಿಗೆ ಕೊರೊನಾ ಪಾಸಿಟಿವ್ ಧೃಡ ಪಟ್ಟಿದ್ದರಿಂದ ಜಿಲ್ಲಾಡಳಿತ ಇಡೀ ಶಾಲೆಯನ್ನು ಬಂದ್ ಮಾಡಿಸಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೊಳೆಗಾಂವ್ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆ ಬಂದ್ ಆಗಿದ್ದು ಶಾಲೆಯ ಶಿಕ್ಷಕನೋರ್ವನಲ್ಲಿ ದೃಢವಾದ ಹಿನ್ನೆಲೆಯಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳ, ಶಿಕ್ಷಕರ ಕೊರೊನಾ ಟೆಸ್ಟ್ ವರದಿ ಬರೋವರೆಗೂ ಶಾಲೆ ಬಂದ್ ಆಗಲಿದೆ.

ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೋಂ ಕ್ವಾರಂಟೈನ್ ನಲ್ಲಿರಬೇಕೆಂದು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ….

Tags:

error: Content is protected !!