Vijaypura

ವಿಜಯಪುರದಲ್ಲಿ ೮ ಅಡಿ ಎತ್ತರದ ಕಂಚಿನ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ; ಅತಿ ಶೀಘ್ರದಲ್ಲಿ ಲೊಕಾರ್ಪಣೆ; ರಾಜು ಬಿರಾದಾರ

Share

ವಿಜಯಪುರ ಜಿಲ್ಲೆಯ ಹಾಲುಮತದ ಬಹುದಿನಗಳ ಕನಸಾಗಿದ್ದ ಕನಕದಾಸರ ವೃತ್ತದ ಲೋಕಾರ್ಪಣೆ ಅತಿ ಶೀಘ್ರದಲ್ಲಿ ನಡೆಯಲಿದೆ ಎಂದು ಹಾಲುಮತದ ಸಮಾಜದ ಮುಖಂಡ ರಾಜು ಬಿರಾದಾರ ತಿಳಿಸಿದ್ರು.

ವಿಜಯಪುರ ದಲ್ಲಿ ಮಾತನಾಡಿದ ಅವರು ಐತಿಹಾಸಿಕ ನಗರವಾದ ವಿಜಯಪುರದಲ್ಲಿ ಕನಕದಾಸರ ವೃತ್ತ ಸ್ಥಾಪಿಸುವದು ಬಹು ದಿನದ ಕನಸಾಗಿತ್ತು. ಅದರಂತೆ ಆಗಿನ ನಗರಸಭೆಯ ಸದಸ್ಯರಾಗಿದ್ದ ರಾಜು ಬಿರಾದಾರ ರವರು ಗಾಂಧಿ ವೃತ್ತದಿಂದ ಸ್ಟೇಶನ್ ರಸ್ತೆಗೆ ಹೋಗುವ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರಿಡಾಂಗಣದ ಕ್ರಾಸ್ ನ ಹತ್ತಿರ ಸರ್ಕಲ್ ‌ಮಾಡುವ ಕುರಿತು ಠರಾವು ಪಾಸ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಒಂದಷ್ಟು ದಿನ ನೆನೆಗುದಿಗೆ ಬಿದ್ದಿತ್ತು. ಎರಡು ವರ್ಷಗಳ ಹಿಂದೆ ಸರಕಾರ ಕನಕದಾಸರ ವೃತ್ತಕ್ಕೆ ಅನುಮೋದನೆ ದೊರೆತ ಪರಿಣಾಮ ಕಳೆದ ವರ್ಷ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಹತ್ತಿರದಲ್ಲಿ ವೃತ್ತ ನಿರ್ಮಿಸಲಾಗಿತ್ತು, ಆದ್ರೆ ಸರ್ಕಲ್ ಗೆ ಬಸ್ ಡಿಕ್ಕಿಯಾದ ಪರಿಣಾಮ ಸರ್ಕಲ್ ಹಾಳಾಗಿತ್ತು.

ಈಗ ಮತ್ತೊಮ್ಮೆ ಸರ್ಕಲ್ ನಿರ್ಮಿಸಲಾಗಿದೆ. ವಿಜಯಪುರ ಜಿಲ್ಲೆಯ ಹಾಲುಮತದ ಸಮಾಜದ ಮುಖಂಡರಾದ ರಾಜು ಕಗ್ಗೋಡ, ಸುರೇಶ ಡಂಬಳ, ಶ್ರೀಕಾಂತ್ ಸಂಗೋಂಗಿ, ಮಹಾಂತೇಶ ಬೇವೂರ ಹಾಗೂ ಚಂದ್ರಶೇಖರ ಬಗಲಿ ಸೇರಿದಂತೆ ಹಲವಾರು ಮುಖಂಡರ ಪ್ರಯತ್ನ ಹಾಗೂ ಶ್ರಮದ ಫಲವಾಗಿ ಎಂಟು ಅಡಿ ಕಂಚಿನ ಮೂರ್ತಿ ಇಂದು ಪ್ರತಿಷ್ಠಾಪಿಸ ಲಾಯಿತು. ನೆರೆ ರಾಜ್ಯ ಮಹಾರಾಷ್ಟ್ರ ದ ಕೊಲಾಪುರದಲ್ಲಿ ಕಂಚಿನ ಮೂರ್ತಿಯನ್ನು ಕೆತ್ತಿಸಲಾಗಿದ್ದು ಅಂದಾಜು ೧೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ರಾಜು ಬಿರಾದಾರ ತಿಳಿಸಿದರು. ಇನ್ನೂ ವೃತ್ತದ ಲೋಕಾರ್ಪಣೆ ಕಾರ್ಯಕ್ರಮವನ್ನು ಅತಿ ಶೀಘ್ರದಲ್ಲಿ ಶ್ರೀಗಳ ಸಾನಿಧ್ಯದಲ್ಲಿ, ಶಾಸಕರು, ಸಚಿವರು ಹಾಗೂ ಸಮಾಜದ ಮುಖಂಡರ, ನೇತೃತ್ವದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು..

Tags:

error: Content is protected !!